ನವದೆಹಲಿ: ದೇಶಿಯ ವಿಮಾನಯಾನ ಸಂಸ್ಥೆಗಳಿಗೆ ರಿಲೀಫ್ ಸಿಕ್ಕಿದೆ. ವಿಮಾನಗಳಲ್ಲಿ ಮಧ್ಯದ ಸೀಟ್ ಖಾಲಿ ಬಿಡುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಈ ಕುರಿತಾಗಿ ಮಹತ್ವದ ಆದೇಶ ಹೊರಡಿಸಲಾಗಿದೆ. ಬಾಂಬೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಸುಪ್ರೀಂಕೋರ್ಟ್ಗೆ ತಜ್ಞರ ವರದಿಯನ್ನು ಡಿಜಿಸಿಎ ಸಲ್ಲಿಕೆ ಮಾಡಿದ್ದು ವರದಿಯಲ್ಲಿ ಸುರಕ್ಷತೆ, ಆರೋಗ್ಯ ಕಾಪಾಡಲು ಮುನ್ನೆಚ್ಚರಿಕೆ ಕ್ರಮ ಅಳವಡಿಕೆಗೆ ಏರಲೈನ್ಸ್ ಗಳಿಗೆ ಶಿಫಾರಸ್ಸು ಮಾಡಿರುವ ಬಗ್ಗೆ ತಿಳಿಸಲಾಗಿದೆ.
ನಾಗರಿಕ ವಿಮಾನಯಾನ ಸಚಿವಾಲಯದಿಂದ ವರದಿ ಸಲ್ಲಿಕೆ ಮಾಡಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಸುಪ್ರೀಂ ಕೋರ್ಟ್ ವಿಮಾನಗಳಲ್ಲಿ ಮಧ್ಯದ ಸೀಟ್ ಖಾಲಿ ಬಿಡುವ ಅಗತ್ಯವಿಲ್ಲವೆಂಬ ಬಾಂಬೆ ಹೈಕೋರ್ಟ್ ತೀರ್ಪು ಎತ್ತಿಹಿಡಿದಿದೆ.