ಅದು 2009ರ ಜೂನ್ 25. ಪಾಪ್ ಲೋಕದ ಧ್ರುವತಾರೆ, ಪಾಪ್ ಕಿಂಗ್ ಮೈಕಲ್ ಜಾಕ್ಸನ್ ಕೊನೆಯುಸಿರೆಳೆದ ದಿನ. ಆದರೆ ಇಂದಿಗೂ ಜಾಕ್ಸನ್ ಜೀವಂತವಾಗಿದ್ದಾರೆ. ಅದು ಅವರ ಕಲೆಯ ಮೂಲಕ. ನೆಟ್ಟಿಗರು ಅವರನ್ನು ಬಹಳವಾಗಿ ನೆನೆಸಿಕೊಂಡಿದ್ದಾರೆ ಈ ಬಗ್ಗೆ ಲಕ್ಷಾಂತರ ಟ್ವೀಟ್ ಗಳು ಹರಿದಾಡಿವೆ.
ಜಾಕ್ಸನ್ ನಿಧನ ಹೊಂದಿ ಹನ್ನೊಂದು ವರ್ಷ ಕಳೆದರೂ ಸಹ ಅವರ ನೆನಪು ಮಾತ್ರ ಇನ್ನೂ ಮಾಸದಿರುವುದು ಅವರ ಸಂಗೀತದ ಪ್ರಭಾವ ಎಷ್ಟರ ಮಟ್ಟಿಗೆ ಮನಸ್ಸುಗಳನ್ನು ಹೊಕ್ಕಿವೆ ಎಂಬುದಕ್ಕೆ ಸಾಕ್ಷಿಯಾಗುತ್ತದೆ. ಜಾಕ್ಸನ್ ಅವರ ಡ್ಯಾನ್ಸ್ ಸ್ಟೆಪ್ ಎಲ್ಲ ತಲೆಮಾರಿನವರಿಗೂ ಇಷ್ಟವಾಗುತ್ತದೆ.
ಅವರ ಮೂನ್ ವಾಕ್ ನ ಡಾನ್ಸ್ ಸ್ಟೆಪ್ ಮತ್ತು ಥ್ರಿಲ್ಲರ್, ಬಿಲ್ಲಿ ಜೀನ್, ಬ್ಲ್ಯಾಕ್ ಎಂಡ್ ವೈಟ್, ಬೀಟ್ ಇಟ್ ಇಂದಿಗೂ ಜನರ ಹೃದಯ ಬಡಿತದಲ್ಲಿ ಸೇರಿಕೊಂಡಿವೆ. ಹೀಗಾಗಿ ಜಾಕ್ಸನ್ ಅಭಿಮಾನಿಗಳು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ವಿಡಿಯೋಗಳು ಫೋಟೋಗಳನ್ನು ಹಾಕಿಕೊಂಡು ತಮಗಿಷ್ಟವಾದ ಕಮೆಂಟ್ ಗಳನ್ನು ಶೇರ್ ಮಾಡುತ್ತಿದ್ದಾರೆ.
https://twitter.com/imangryasfbitch/status/1276025052232908800?ref_src=twsrc%5Etfw%7Ctwcamp%5Etweetembed%7Ctwterm%5E1276025052232908800%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fhis-legacy-will-live-on-netizens-fondly-remember-king-of-pop-michael-jackson-on-his-death-anniversary%2F611677
https://twitter.com/AmyWhyt59567304/status/1276024885626757120?ref_src=twsrc%5Etfw%7Ctwcamp%5Etweetembed%7Ctwterm%5E1276024885626757120%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fhis-legacy-will-live-on-netizens-fondly-remember-king-of-pop-michael-jackson-on-his-death-anniversary%2F611677