ಕೆಲವೊಮ್ಮೆ ಮನಸ್ಸಿನಲ್ಲಿ ಏನನ್ನಾದರೂ ಯೋಚಿಸುತ್ತಾ ಯಾವುದಾದರು ವಸ್ತುವನ್ನು ನೋಡಿದರೂ ಚಿತ್ತದಲ್ಲಿನ ಆ ಚಿತ್ರ ವಸ್ತುವಿನಲ್ಲಿ ಕಾಣಲಾರಂಭಿಸುತ್ತದೆ.
ಬೆಟ್ಟ, ಗುಡ್ಡ, ಮರ, ಗಿಡ, ಕಲ್ಲು, ಮಣ್ಣಿನ ರಾಶಿ, ಗೋಡೆ ಹೀಗೆ ಏನನ್ನೇ ನೋಡಿದರೂ ಮನಸ್ಸಿನಲ್ಲಿ ಕಲ್ಪಿತವಾದ ಚಿತ್ರವೇ ಅಲ್ಲೂ ಒಡಮೂಡಿದಂತೆ ಭಾಸವಾಗುತ್ತದೆ.
ಎಷ್ಟೋ ಬಾರಿ ಯಾರದ್ದೋ ಬಗ್ಗೆ ಹೆಚ್ಚು ಚಿಂತೆ, ಯೋಚನೆ ಮಾಡುತ್ತಿರುತ್ತೇವೆ. ಎದುರಿಗೆ ಬೇರೆ ವ್ಯಕ್ತಿ ಬಂದು ನಿಂತರೂ ಮನಸ್ಸಿನಲ್ಲಿ ಚಿಂತಿಸುತ್ತಿರುವ ವ್ಯಕ್ತಿಯನ್ನೇ ಕಂಡಂತಾಗುತ್ತದೆ.
14 ವರ್ಷದ ನಾಯಿಮರಿ ಸನ್ನಿ ಸತ್ತಾಗಲೂ ಇದೇ ಪವಾಡ ನಡೆದಿದ್ದು. ಮನೆಗೆ ತಂದು ಪ್ರೀತಿಯಿಂದ ಬೆಳೆಸಿದ್ದ ಸನ್ನಿ, ಮೊನ್ನೆ ಭಾನುವಾರ ಮಧುಮೇಹದಿಂದ ಕೊನೆಯುಸಿರೆಳೆದಿತ್ತು. ಅಚ್ಚುಮೆಚ್ಚಿನ ಸನ್ನಿಯ ಸಾವಿನ ಆಘಾತದಿಂದ ಹೊರಬಾರದ ಲೂಸಿ ಲೆಡ್ಜ್ ವೇ, ಸನ್ನಿಯ ಚಿಂತೆಯಲ್ಲೇ ಮುಳುಗಿದ್ದಳು. ಆಘಾತದಿಂದ ಹೊರಲು ಪ್ರಿಯಕರ ಟಾಮ್ ಜೊತೆಯಲ್ಲಿ ಒಂದು ಲಾಂಗ್ ಡ್ರೈವ್ ಹೋದಳು.
ಬೆಂಚಿನ ಮೇಲೆ ಕುಳಿತಿದ್ದ ಲೂಸಿ, ಸನ್ನಿಯ ಚಿಂತೆಯಲ್ಲೇ ಆಕಾಶದತ್ತ ದಿಟ್ಟಿಸಿದ್ದಾಳೆ. ಮೋಡಗಳು ಸನ್ನಿಯಂತೆಯೇ ಕಾಣಲಾರಂಭಿಸಿವೆ. ತನ್ನ ಸನ್ನಿಯೇ ಮೋಡವಾಗಿ ಕಿಲಕಿಲ ಎನ್ನುತ್ತಿದ್ದಾನೆ ಎಂದುಕೊಂಡು ಮೋಡದ ಫೋಟೊ ತೆಗೆದುಕೊಂಡಿದ್ದಾಳೆ. ಸನ್ನಿಯಂತೆಯೇ ಕಾಣುವ ಮೋಡ ಹಾಗೂ ಸನ್ನಿಯ ಫೋಟೋಗಳನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.
https://www.facebook.com/lucybabeyx/posts/3354770801200965