ಮೇಕೆ ಮರಿಗಳ ಡಿಎನ್ಎ ಪರೀಕ್ಷೆ ಆಗಬೇಕು ಎಂದು ಪಟ್ಟು ಹಿಡಿದಿರುವ ಮಹಿಳೆಯೊಬ್ಬಳು, ಮೇಕೆಗೆ ತಾನು ಕೊಟ್ಟಿರುವ ಅಷ್ಟೂ ಹಣ ವಾಪಸ್ ಕೊಡಿಸಿ ಎಂದು ಕೋರ್ಟ್ ಮೆಟ್ಟಿಲೇರಿದ್ದಾಳೆ.
ಕಳೆದ ಡಿಸೆಂಬರ್ ನಲ್ಲಿ ಫ್ಲೋರಿಡಾದ ಕ್ರಿಸ್ ಹೆಡ್ ಸ್ಟ್ರಾಮ್ ಎಂಬ ಮಹಿಳೆ ತನ್ನ ಪಕ್ಕದ ಮನೆಯವರ ಬಳಿ 900 ಡಾಲರ್ ಕೊಟ್ಟು ಐದು ಮೇಕೆ ಮರಿಗಳನ್ನು ಕೊಂಡುಕೊಂಡಿದ್ದಳು.
ಐದು ಕೂಡ ಅತಿ ಕುಬ್ಜ ಮೇಕೆಗಳು. ಅಮೆರಿಕಾ ಮೇಕೆ ಡೈರಿ ಸಂಘದಲ್ಲಿ ನೋಂದಾಯಿಸಿದ ಮೇಕೆಗಳಿಗೆ ಭಾರೀ ಬೇಡಿಕೆ ಇದೆ. ಆದರೆ, ಇವು ನೋಂದಾಯಿತವಲ್ಲದಿದ್ದರೂ ಸುಳ್ಳು ಹೇಳಿ ದುಬಾರಿ ದರಕ್ಕೆ ಮಾರಲಾಗಿದೆ ಎಂಬುದು ಈಕೆಯ ವಾದ.
ಹೀಗಾಗಿ ಇವು ಯಾವ ಡೈರಿಯ ಮೇಕೆಗಳು ಎಂಬುದು ಪತ್ತೆಯಾಗಬೇಕಿದೆ. ಪಿತೃತ್ವ ಪರೀಕ್ಷೆ ನಡೆಸಿ, ಸಾಬೀತುಪಡಿಸಬೇಕು. ಇಲ್ಲದಿದ್ದರೆ, 900 ಡಾಲರ್ ಹಿಂದಿರುಗಿಸಬೇಕೆಂದು ದಾವೆ ಹೂಡಿದ್ದಾಳೆ.
ಇದೀಗ ಮೇಕೆ ಮಾರಿದ ಹ್ಯಾತರ್ ಡ್ಯಾನಿಯರ್, ಮೇಕೆಗಳ ತಂದೆ ಹುಡುಕಿಕೊಂಡು ಹೋಗಬೇಕಾಗಿದೆ. ಡೈರಿಯಲ್ಲಿ 40 ಮೇಕೆಗಳಿದ್ದು, ಅವುಗಳ ತುಪ್ಪಟ(ಕೂದಲು) ತಂದು ಡಿಎನ್ಎ ಪರೀಕ್ಷೆ ಮಾಡಿಸಬೇಕಿದೆ.