ಕೊರೊನಾದಿಂದ ಪಾರಾಗಲು ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿಗಳನ್ನ ಪಾಲಿಸುವುದರ ಜೊತೆಗೆ ತಮ್ಮದೇ ಆದ ರೀತಿಯಲ್ಲಿ ತೋಚಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದಾರೆ.
ಈಗಂತೂ ಅಪರಿಚಿತರಿಂದ ಮಾತ್ರವಲ್ಲ, ಕುಟುಂಬ ಸದಸ್ಯರಿಂದಲೂ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. ಪರಸ್ಪರ ಆರೋಗ್ಯವಾಗಿ ಇರಬೇಕೆಂಬ ದೃಷ್ಟಿಯಿಂದ ಈ ಅಂತರ ಅನಿವಾರ್ಯವಾಗಿದೆ.
ಇನ್ನು ಕೆಲ ಸಂಸ್ಥೆಗಳು ಗ್ರಾಹಕರಿಗೂ ಇಂತಹುದೇ ನಿರ್ಭಿಡೆಯ ನೀತಿಗಳನ್ನು ಪಾಲಿಸುತ್ತಿದ್ದು, ಅಮೆಜಾನ್ ಸಂಸ್ಥೆ ಕೂಡ ಅಳವಡಿಸಿಕೊಂಡಿದೆ.
ಆರ್ಡರ್ ಮಾಡಿದ್ದ ಪಾರ್ಸೆಲ್ ತಂದು ಮನೆ ಬಾಗಿಲಲ್ಲಿ ಇಡುವ ಡೆಲಿವರಿ ಮಹಿಳೆ, ಕರೆಗಂಟೆ (ಕಾಲಿಂಗ್ ಬೆಲ್) ಒತ್ತಿ, ಅಬ್ರಕದಬ್ರ ಎನ್ನುತ್ತಾ ಓಡಿ ಹೋಗುತ್ತಾಳೆ.
ಇದು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ನಗು ತರಿಸುವಂತಿದೆಯಾದರೂ ಅಮೆಜಾನ್ ಸಂಸ್ಥೆ ಕೈಗೊಂಡಿರುವ ಉಪಕ್ರಮಗಳು ಶ್ಲಾಘನೀಯ.
https://www.facebook.com/Lynnstaffieri/posts/10222746600191977