ದೇಶದಲ್ಲಿ ವ್ಯಾಪಕವಾಗಿರುವ ಕೊರೊನಾ ಮಹಾಮಾರಿ ಎಲ್ಲರನ್ನು ಕಂಗಾಲಾಗಿಸಿದೆ. ಇದರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ಡೌನ್ ಜಾರಿಗೊಳಿಸಿತ್ತಾದರೂ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.
ಕೊರೊನಾದಿಂದ ತಪ್ಪಿಸಿಕೊಳ್ಳಲು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಜೊತೆಗೆ ಹವಾ ನಿಯಂತ್ರಣ ವ್ಯವಸ್ಥೆಯಿದ್ದಲ್ಲಿ ಕೊರೊನಾ ವೈರಸ್ ಬಹುಕಾಲ ಜೀವಂತವಾಗಿ ಇರುತ್ತದೆ ಎನ್ನಲಾಗಿದೆ.
ಹೀಗಾಗಿ ಎಸಿ ರಹಿತವಾಗಿ ಹಲವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಹೊರತಾಗಿಲ್ಲ. ಇಂದು ಸಭೆಯನ್ನು ನಡೆಸುತ್ತಿರುವ ವೇಳೆ ಎಸಿ ಆಫ್ ಮಾಡುವಂತೆ ಸೂಚಿಸಿದ ಅವರು, ಬಳಿಕ ಸಭೆ ಮುಂದುವರೆಸಿದ್ದಾರೆ.