ಕೃಷಿಯೇತರ ಸಣ್ಣ – ಅತಿಸಣ್ಣ ಉದ್ಯಮಿಗಳಿಗೆ ನೆರವಾಗುವ ಉದ್ದೇಶದಿಂದ 2015ರಲ್ಲಿ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಆರಂಭಿಸಲಾಗಿದ್ದು, ಯೋಜನೆ ಅಡಿ 10 ಲಕ್ಷ ರೂಪಾಯಿಗಳವರೆಗೆ ಸಾಲ ಒದಗಿಸಲಾಗುತ್ತಿತ್ತು.
ಇದೇ ಯೋಜನೆಯ ‘ಶಿಶು’ ವಿಭಾಗದಲ್ಲಿ ಯಾವುದೇ ಜಾಮೀನಿಲ್ಲದೆ ಫಲಾನುಭವಿಗಳಿಗೆ 50 ಸಾವಿರ ರೂಪಾಯಿಗಳವರೆಗೆ ಸಾಲ ನೀಡಲಾಗುತ್ತಿತ್ತು. ಈಗ ‘ಶಿಶು’ ಯೋಜನೆ ಫಲಾನುಭವಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ.
ಶಿಶು ವಿಭಾಗದಲ್ಲಿ ಸಾಲ ಪಡೆಯುವವರಿಗೆ ಶೇಕಡಾ 2 ರಷ್ಟು ಬಡ್ಡಿ ಮನ್ನಾ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದರಿಂದ ಸಣ್ಣ – ಅತಿಸಣ್ಣ ಉದ್ಯಮದ ಫಲಾನುಭವಿಗಳಿಗೆ ಅನುಕೂಲಕರವಾಗಲಿದೆ.