alex Certify ಮನೆಯಲ್ಲೇ ಮಾಡಿ ‘ಚಾಕೋಲೇಟ್ʼ ಐಸ್ ಕ್ರೀಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯಲ್ಲೇ ಮಾಡಿ ‘ಚಾಕೋಲೇಟ್ʼ ಐಸ್ ಕ್ರೀಂ

ಐಸ್ ಕ್ರೀಂ ಎಂದರೆ ಯಾರಿಗಿಷ್ಟವಿಲ್ಲ. ಅದು ಅಲ್ಲದೇ ಈಗ ಹೊರಗಡೆಯಿಂದ ತಂದು ತಿನ್ನುವುದಕ್ಕೆ ಆಗುವುದಿಲ್ಲ. ಹಾಗಾಗಿ ಐಸ್ ಕ್ರಿಂ ತಿನ್ನಬೇಕು ಅನಿಸಿದಾಗ ಮನೆಯಲ್ಲಿಯೇ ಮಾಡಿ ಸವಿಯಿರಿ ಸುಲಭವಾದ ಚಾಕೋಲೆಟ್ ಐಸ್ ಕ್ರಿಂ.

ಬೇಕಾಗುವ ಸಾಮಾಗ್ರಿಗಳು:

1/2ಕಪ್ – ಕೋಕೊ ಪೌಡರ್, ½ ಕಪ್ – ಸಕ್ಕರೆ, ¼ ಕಪ್ ಬ್ರೌನ್ ಶುಗರ್, ¾ ಕಪ್ – ಹಾಲು, 1.5 ಕಪ್ – ಕ್ರೀಂ, 1.5 ಟೀ ಸ್ಪೂನ್ – ವೆನಿಲ್ಲಾ ಎಸೆನ್ಸ್, ಚಿಟಿಕೆ – ಉಪ್ಪು.

ಮಾಡುವ ವಿಧಾನ:

ಒಂದು ಬೌಲ್ ಗೆ ಸಕ್ಕರೆ, ಕೋಕೊ ಪೌಡರ್ ಎರಡನ್ನೂ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಹಾಲು ಸೇರಿಸಿ ಮತ್ತೊಮ್ಮೆ ಬೀಟ್ ಮಾಡಿಕೊಳ್ಳಿ.

ನಂತರ ಕ್ರೀಂ ಹಾಗೂ ವೆನಿಲ್ಲಾ ಎಸೆನ್ಸ್ , ಚಿಟಿಕೆ ಉಪ್ಪು ಸೇರಿಸಿ ಇದನ್ನು ಒಂದು ಐಸ್ ಕ್ರಿಂ ಮೇಕರ್ ಗೆ ಹಾಕಿ 20 ನಿಮಿಷಗಳ ಕಾಲ ಬೀಟರ್ ನಿಂದ ಬೀಟ್ ಮಾಡಿಕೊಳ್ಳಿ.

ಈ ಮಿಶ್ರಣ ಚೆನ್ನಾಗಿ ಕ್ರಿಂ ನ ಹದಕ್ಕೆ ಬರಲಿ. ನಂತರ ಇದನ್ನು ಒಂದು ಬಾಕ್ಸ್ ಗೆ ಹಾಕಿ 6 ಗಂಟೆಗಳ ಕಾಲ ಫ್ರೀಜರ್ ನಲ್ಲಿಡಿ. ರುಚಿಕರವಾದ ಚಾಕೋಲೇಟ್ ಐಸ್ ಕ್ರೀಂ ಸವಿಯಲು ರೆಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...