ದೇಶದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ ಹಿಂದಿಕ್ಕಿ ಡೀಸೆಲ್ ಬೆಲೆ ಮುಂದೆ ಹೋಗಿದೆ. ಸಾಮಾನ್ಯವಾಗಿ ಪೆಟ್ರೋಲ್ ಬೆಲೆಯೇ ಹೆಚ್ಚಾಗಿರುತ್ತದೆ. ಆದರೆ ಇದೀಗ ಡೀಸೆಲ್ ಬೆಲೆ ದೆಹಲಿಯಲ್ಲಿ ಹೆಚ್ಚಾಗಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಯಾವ ದರ ಹೆಚ್ಚು ಕಡಿಮೆಯಾದರೂ ಪೆಟ್ರೋಲ್ – ಡೀಸೆಲ್ ದರ ಮಾತ್ರ ಕಡಿಮೆಯಾಗುತ್ತಿಲ್ಲ. ಅದರಲ್ಲೂ ಕಳೆದ ಹದಿನೆಂಟು ದಿನಗಳಿಂದ ಪೆಟ್ರೋಲ್ – ಡೀಸೆಲ್ ದರಗಳು ಏರಿಕೆಯಾಗುತ್ತಲೇ ಇವೆ. ಪೆಟ್ರೋಲ್ – ಡೀಸೆಲ್ ದರಗಳಲ್ಲಿ ಸಾಮಾನ್ಯವಾಗಿಯೇ 5 ರಿಂದ 8 ರೂಪಾಯಿಯಷ್ಟು ವ್ಯತ್ಯಾಸ ಇರುತ್ತದೆ. ಇದರಲ್ಲಿ ಪೆಟ್ರೋಲ್ ದರವೇ ಹೆಚ್ಚು ಅನ್ನೋದು ಗೊತ್ತಿರುವ ವಿಚಾರ.
ಆದರೆ ದೆಹಲಿಯಲ್ಲಿ ಈ ವ್ಯತ್ಯಾಸ ಇದ್ದರೂ ಅದು ಡೀಸೆಲ್ ಬೆಲೆಯಲ್ಲಿ. ಹೌದು ದೆಹಲಿ ನಗರದಲ್ಲಿ ಪೆಟ್ರೋಲ್ಗಿಂತ ಡೀಸೆಲ್ ದರ ಹೆಚ್ಚಾಗಿದೆಯಂತೆ. ಪ್ರತಿ ಲೀಟರ್ ಪೆಟ್ರೋಲ್ ದರಕ್ಕೆ 8.50 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ದರಕ್ಕೆ 10.01 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹೀಗಾಗಿ ದೆಹಲಿಯಲ್ಲಿ ಈಗ ಪ್ರತಿ ಲೀಟರ್ ಡೀಸೆಲ್ ಬೆಲೆ 79.88 ರೂಪಾಯಿಗಳಾಗಿದ್ದರೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 79.76 ರೂಪಾಯಿಗಳಾಗಿದೆ. ಈ ಎರಡರ ನಡುವೆ 48 ಪೈಸೆ ಅಂತರವಿದೆ.