ಅಂಚೆ ಕಚೇರಿಗೆ ಬಂದ ಪಾರ್ಸೆಲ್ ಒಂದು ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿ ಅನೇಕರನ್ನು ಆಸ್ಪತ್ರೆ ಸೇರುವಂತೆ ಮಾಡಿದೆ.
ಪಾರ್ಸೆಲ್ ನಿಂದ ದುರ್ವಾಸನೆ ಬರಲಾರಂಭಿಸಿದ್ದು, ಇಡೀ ಕಟ್ಟಡವಷ್ಟೇ ಅಲ್ಲದೆ, ಅಕ್ಕ-ಪಕ್ಕದ ಕಟ್ಟಡದವರಿಗೂ ಹಬ್ಬಿದೆ. ಇದರಿಂದ ಅನುಮಾನ ಹಾಗೂ ಆತಂಕ ಮೂಡಿದೆ.
ಪಾರ್ಸೆಲ್ ಅಲ್ಲಿ ಏನಿರಬಹುದು ಎಂಬ ಭೀತಿ ಶುರುವಾಗಿದ್ದು, ಅದರ ಹತ್ತಿರಕ್ಕೆ ಯಾರೂ ಸುಳಿಯದಂತಾಗಿತ್ತು. ಪೊಲೀಸ್, ಅಗ್ನಿಶಾಮಕ ದಳ, ಆ್ಯಂಬುಲೆನ್ಸ್ ಎಲ್ಲವೂ ಬಂದು ನಿಂತವು.
ಕೆಟ್ಟ ವಾಸನೆಯಿಂದಾಗಿ ಹಲವರಲ್ಲಿ ವಾಂತಿ, ವಾಕರಿಕೆ ಶುರುವಾಗಿದ್ದು, ಆರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. 50 ಜನರನ್ನು ಕಟ್ಟಡದಿಂದ ರಕ್ಷಿಸಿ ಹೊರತರಲಾಯಿತು.
ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿ ಪಾರ್ಸೆಲ್ ತೆರೆದು ನೋಡಿದ್ದು, ಅದರೊಳಗೆ ನ್ಯುರೆಂಬರ್ಗ್ ಪ್ರದೇಶದಿಂದ ಸ್ನೇಹಿತರೊಬ್ಬರಿಗಾಗಿ ಕಳುಹಿಸಿದ ಥಾಯ್ ಡ್ಯುರೇನ್ ಹಣ್ಣುಗಳಿದ್ದವು.
ಹಲಸಿನ ಹಣ್ಣಿನಂತೆಯೇ ಕಾಣುವ ಇದು ಜಗತ್ತಿನ ಅತಿ ಹೆಚ್ಚು ದುರ್ನಾತ ಬೀರುವ ಹಣ್ಣು. ಆದರೆ, ರುಚಿ ಮತ್ತು ಪೋಷಕಾಂಶದ ವಿಚಾರದಲ್ಲಿ ಈ ಹಣ್ಣಿನ ಮುಂದೆ ಬೇರಾವ ಹಣ್ಣೂ ಇಲ್ಲ.