ಅಮೆರಿಕದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ ನಡೆದ ಹಲ್ಲೆ ಹಾಗೂ ಹತ್ಯೆ ಬಳಿಕ ಇದೀಗ ಎಲ್ಲೆಡೆ ವರ್ಣ ಬೇಧ ನೀತಿಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಹೊಸ ಸೇರ್ಪಡೆಯೂ ಆಗಿದೆ.
ಹೌದು, ವಧು – ವರರ ಅನ್ವೇಷಣಾ ವೇದಿಕೆಯಾಗಿರುವ ಶಾದಿ.ಕಾಮ್ನಲ್ಲಿ ಚರ್ಮದ ಬಣ್ಣದ ಆಯ್ಕೆಯ ಬಗ್ಗೆ ಇದ್ದ ಫಿಲ್ಟರ್ ನ್ನು ತೆಗೆದಿರುವುದಾಗಿ ಹೇಳುವ ಮೂಲಕ ವರ್ಣಬೇಧ ನೀತಿಯ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿದೆ.
ಇದಕ್ಕೂ ಮೊದಲು ಈ ಫಿಲ್ಟರ್ ವಿಷಯದಲ್ಲಿ ಪುಣೆ ಮೂಲದ ಯುವತಿಯೊಬ್ಬರು ಧ್ವನಿ ಎತ್ತಿದ್ದರು. ಈ ರೀತಿ ಚರ್ಮದ ಬಣ್ಣದ ಬಗ್ಗೆ ಫಿಲ್ಟರ್ ಇಡುವ ಮೂಲಕ ವರ್ಣಬೇಧಕ್ಕೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ಆನ್ಲೈನ್ ಅಭಿಯಾನ ಆರಂಭಿಸಿದ್ದರು. ಇದರ ಬೆನ್ನಲೇ ಶಾದಿ.ಕಾಮ್ ಈ ನಿರ್ಧಾರಕ್ಕೆ ಬಂದಿದೆ.
ಈಗಾಗಲೇ ಜಾನ್ಸನ್ ಅಂಡ್ ಜಾನ್ಸನ್ ಸಂಸ್ಥೆ ಸೇರಿದಂತೆ ಅನೇಕ ಸಂಸ್ಥೆಗಳು ವರ್ಣಬೇಧ ಸಾರುವಂತಹ ಉತ್ಪನ್ನವನ್ನು ನಿಲ್ಲಿಸುವುದಾಗಿ ಪ್ರಕಟಿಸಿದೆ. ಇದೀಗ ಇದಕ್ಕೆ ಶಾದಿ.ಕಾಮ್ ಹೊಸ ಸೇರ್ಪಡೆಯಾಗಿದೆ.