ಮನುಷ್ಯ – ಸಾಧು ಪ್ರಾಣಿ – ಪಕ್ಷಿಗಳ ನಡುವೆ ಸಾಧಾರಣವಾಗಿ ನಂಟು ಬೆಸೆದುಕೊಳ್ಳುತ್ತದೆ. ನಾಯಿ, ಬೆಕ್ಕು, ದನ – ಕರು, ಪಾರಿವಾಳ, ಗಿಳಿ ಹೀಗೆ….. ಹಲವು ಪ್ರಾಣಿ – ಪಕ್ಷಿಗಳ ಜತೆ ಒಡನಾಟ ಇಟ್ಟುಕೊಳ್ಳುತ್ತೇವೆ. ಹತ್ತಿರಕ್ಕೆ ಬಿಟ್ಟುಕೊಂಡು ಮುದ್ದಾಡುತ್ತೇವೆ.
ಅದೇ ಕ್ರೂರ ಪ್ರಾಣಿಗಳನ್ನ ಹತ್ತಿರ ಬಿಟ್ಟುಕೊಳ್ಳುವುದಿರಲಿ, ನಾವೂ ಅದರ ಸಮೀಪಕ್ಕೂ ಹೋಗುವುದಿಲ್ಲ. ಕಂಡೊಡನೆ ಹೌಹಾರುತ್ತೇವೆ, ಇಲ್ಲವೇ ಹೊಡೆದು ಕೊಲ್ಲುತ್ತೇವೆ.
ಇತ್ತೀಚೆಗೆ ಮೊಸಳೆಯ ಬಾಯಿಗೆ ಸಿಲುಕಿದ್ದ ಮಗುವನ್ನ ಕಾಪಾಡಲು ತಾಯಿಯೊಬ್ಬಳು ಅದರ ಮೂಗಿನ ಹೊಳ್ಳೆಗಳನ್ನು ಅದುಮಿ ಹಿಡಿದು, ಮಗುವನ್ನು ಮೊಸಳೆ ಬಾಯಿಂದ ಬಿಡಿಸಿಕೊಂಡು ಬಂದಿದ್ದಳು. ಆಗ ಕೈಗೆ ಕಚ್ಚಿ ಗಾಯಗೊಳಿಸಿತ್ತು. ಮೊಸಳೆಯನ್ನ ನೆನಪಿಸಿಕೊಂಡರೆ ಕಣ್ಣೆದುರು ಬರುವುದೇ ಇಂತಹ ದುರಂತಗಳು.
ಆದರೆ, ಇಲ್ಲೊಬ್ಬ ಭೂಪ ದೈತ್ಯದೇಹಿ ಮೊಸಳೆಯೊಂದರ ಗಲ್ಲವನ್ನು ತಡವುತ್ತಿದ್ದಾನೆ. ಅದೂ ಖುಷಿ ಅನುಭವಿಸುತ್ತಿದೆ. ಈ ವಿಡಿಯೋ ವೈರಲ್ ಆಗಲು ಹೆಚ್ಚು ಸಮಯ ಬೇಕಾಗಲಿಲ್ಲ. 1.2 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ.
https://www.instagram.com/p/CBbpVWnAbqL/?utm_source=ig_embed