ಕೋವಿಡ್-19 ಲಾಕ್ಡೌನ್ ಸಮಯದಲ್ಲಿ ಹಿಪ್ನೊಬರ್ತಿಂಗ್ ಟೆಕ್ನಿಕ್ಗಳ ಮೂಲಕ ಬರೋಬ್ಬರಿ 5ಕೆಜಿ ತೂಗುವ ಮಗುವೊಂದಕ್ಕೆ ಎಮ್ಮಾ ಫೆರಾನ್ ಎಂಬ ಮಹಿಳೆಯೊಬ್ಬರು ಜನ್ಮವಿತ್ತಿದ್ದಾರೆ.
ಅಟ್ಟಿಕಸ್ ಜೇಮ್ಸ್ ಫೆರಾನ್ ಹೆಸರಿನ ಈ ಮಗುವು ಹುಟ್ಟುವಾಗಲೇ 5ಕೆಜಿ ತೂಕವಿದ್ದು, ಬ್ರಿಟನ್ನ ಅತ್ಯಂತ ದೊಡ್ಡ ಕಂದಮ್ಮ ಎಂಬ ಶ್ರೇಯಕ್ಕೆ ಪಾತ್ರವಾಗಿದೆ. ಚೆಷೈರ್ನ ಥಾರ್ನ್ಟನ್-ಲೆ-ಮೂರ್ಸ್ ಎಂಬಲ್ಲಿ ವಾಸಿಸುವ ಎಮ್ಮಾ ಅದಾಗಲೇ ಮೂರು ಮಕ್ಕಳ ತಾಯಿಯೂ ಹೌದು. ಅವರ ಮೊದಲ ಮಗಳು ಆರಿಯಾ 4.5 ಕೆಜಿ ತೂಕವಿದ್ದರೆ, ಎರಡನೇ ಮಗಳು ಅಮೇಲಿಯಾ ಜನನವಾದಾಗ 4ಕೆಜಿ ತೂಕವಿದ್ದಳು.
ಇದೀಗ ತನ್ನ ನಾಲ್ಕನೇ ಹೆರಿಗೆಯನ್ನು ಮನೆಯಲ್ಲೇ ಕಂಡ ಎಮ್ಮಾ, ಈ ಸಂದರ್ಭ ಕೇವಲ ಎರಡೂವರೆ ಗಂಟೆಗಳ ಅವಧಿಗೆ ಪ್ರಸವ ವೇದನೆ ಅನುಭವಿಸಿದ್ದಲ್ಲದೇ, ಸ್ವಾಭಾವಿಕವಾಗಿ ಮಗುವಿಗೆ ಜನ್ಮವಿತ್ತಿದ್ದಾರೆ.