ಸೂಪರ್ ಮಾರ್ಕೆಟ್‌ನಲ್ಲಿ ಖರೀದಿ ಮಾಡಿ ತಂದ ಮೊಟ್ಟೆಗಳಿಗೆ ಕೃತಕವಾಗಿ ಕಾವು ಕೊಟ್ಟು ಕಾಪಾಡಿದ ಮಹಿಳೆಯೊಬ್ಬರು ಅವುಗಳಿಂದ ಬಾತುಕೋಳಿ ಮರಿಗಳಿಗೆ ಜನ್ಮ ಕೊಡಿಸಿದ್ದಾರೆ.
ಬ್ರಿಟನ್‌ನ ಹರ್ಟ್‌ಫೋರ್ಡ್‌ಶೈರ್‌ನ ಚಾರ್ಲೀ ಲೆಲ್ಲೋ ಹೆಸರಿನ 29ರ ಮಹಿಳೆಯೊಬ್ಬರು ಈ ಬಾತುಕೋಳಿ ಮೊಟ್ಟೆಗಳನ್ನು ಇನ್‌ಕ್ಯೂಬೇಟರ್‌ನಲ್ಲಿ ಇಟ್ಟು, ಒಂದು ತಿಂಗಳ ಮಟ್ಟಿಗೆ ಜತನದಿಂದ ಕಾಪಾಡಿ, ಮರಿಗಳು ಹೊರ ಬರಲು ನೆರವಾಗಿದ್ದಾರೆ.
ಫಾರ್ಮ್‌ನಿಂದ ಪ್ಯಾಕಿಂಗ್ ಕೇಂದ್ರಕ್ಕೆ ಬಂದು, ಅಲ್ಲಿಂದ ಸೂಪರ್ ಮಾರ್ಕೆಟ್‌ಗೆ ಬಂದ ಮೊಟ್ಟೆಗಳಿಂದ ಮರಿಗಳಿಗೆ ಜನ್ಮ ಕೊಟ್ಟ ಈ ಗಾಥೆಯು ಇದೀಗ ನೆಟ್‌ನಲ್ಲಿ ಸುದ್ದಿಯಲ್ಲಿದೆ. ಈ ಕುರಿತು ಖುದ್ದು ವೇಟ್‌ರೋಸ್ ಸೂಪರ್ ಮಾರ್ಕೆಟ್ ಸಹ ಚಕಿತಗೊಂಡಿದ್ದು, ಸೂಪರ್ ಮಾರ್ಕೆಟ್‌ನಲ್ಲಿರುವ ಮೊಟ್ಟೆಗಳು ಫಲಗೂಡುವುದು ಅತ್ಯಪರೂಪ ಎಂದಿದೆ.