ಕೋವಿಡ್-19 ಲಾಕ್ ಡೌನ್ ಸಡಿಲಿಕೆ ಕೊಟ್ಟ ಬಳಿಕ ರಾಜ್ಯಾದ್ಯಂತ ರೆಸ್ಟೋರೆಂಟ್ ಗಳು ಒಂದೊಂದಾಗಿಯೇ ಮತ್ತೆ ಬ್ಯುಸಿನೆಸ್‌ಗೆ ತೆರೆದುಕೊಳ್ಳುತ್ತಿವೆ. ಆದರೆ ಸೋಂಕಿನ ರಿಸ್ಕ್ ಸಿಕ್ಕಾಪಟ್ಟೆ ಇರುವ ಕಾರಣ ರೆಸ್ಟೋರೆಂಟ್ ಗಳಲ್ಲಿ ವ್ಯಾಪಾರ ವಹಿವಾಟು ಬಹಳ ಕಡಿಮೆ ಆಗಿಬಿಟ್ಟಿದೆ.
ಇಂಥ ಸಂದರ್ಭದಲ್ಲೇ ಮೈಸೂರಿನ ರೈಲ್ವೇ ಮ್ಯೂಸಿಯಮ್‌ನಲ್ಲಿ ’ಕೋಚ್ ರೆಸ್ಟೋರೆಂಟ್’ ಒಂದನ್ನು ಆರಂಭಿಸಲಾಗಿದೆ. ಏಕಕಾಲದಲ್ಲಿ 20 ಮಂದಿ ಈ ರೆಸ್ಟೋರೆಂಟ್ ನಲ್ಲಿ ಕೂರಲು ಸಾಧ್ಯವಿದೆ. ನೈಋತ್ಯ ರೈಲ್ವೇ ಈ ಹೊಸ ಐಡಿಯಾಗೆ ರೂಪು ನೀಡಿದೆ.
ಖುದ್ದು ರೈಲಿನ ಬೋಗಿಯೊಂದನ್ನೇ ರೆಸ್ಟೋರೆಂಟ್ ಮಾಡಲಾಗಿರುವ ಈ ಕೋಚ್‌ನ ಕಿಟಕಿಗಳಿಂದ ಸುತ್ತಲಿನ ಲೋಕೋಮೋಟಿವ್‌ಗಳು, ವಿಂಟೇಜ್ ರೈಲುಗಳು ಹಾಗೂ ರೈಲ್ವೇ ರಂಗದ ಸಾಕಷ್ಟು ವಸ್ತುಗಳನ್ನು ನೋಡಿಕೊಂಡು ರಿಫ್ರೆಶ್‌ಮೆಂಟ್ ಗಳನ್ನು ಎಂಜಾಯ್ ಮಾಡಬಹುದು.