ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 322 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 9721 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಇವತ್ತು ಒಂದೇ ದಿನ 274 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಒಟ್ಟು 6004 ಜನ ಇದುವರೆಗೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
3563 ಸಕ್ರಿಯ ಪ್ರಕರಣಗಳು ಇದ್ದು 120 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವತ್ತು ಪತ್ತೆಯಾದ ಪ್ರಕರಣಗಳ ಪೈಕಿ 64 ಮಂದಿ ಅಂತರರಾಜ್ಯ ಪ್ರಯಾಣಿಕರಾಗಿದ್ದು 5 ಜನ ಅಂತರಾಷ್ಟ್ರೀಯ ಪ್ರಯಾಣಿರಾಗಿದ್ದಾರೆ. ಇವತ್ತು ಒಂದೇ ದಿನ 8 ಜನ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 150 ಕ್ಕೆ ಏರಿಕೆಯಾಗಿದೆ.