ಇನ್ನು ಭೂಮಿಗೆ ಬಂದು 54 ದಿನ ಕಳೆದ ಹಸುಗೂಸು ತಂದೆಯಿಂದಲೇ ಹಲ್ಲೆಗೊಳಗಾಗಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಪ್ರಕರಣ ಕೇರಳದ ಕಣ್ಣೂರು ನಲ್ಲಿ ನಡೆದಿದೆ.
ಕೊಚ್ಚಿಯ ಕೊಲೆನ್ಚೆರಿಯ ಎಂ ಒ ಎಸ್ ಸಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ ಪಡೆಯುತ್ತಿದ್ದು, ತಲೆಗೆ ಬಲವಾದ ಪೆಟ್ಟಾಗಿರುವುದರಿಂದ ಪರಿಸ್ಥಿತಿ ಗಂಭೀರವಾಗಿದೆ. ಮುಂದಿನ 48 ಗಂಟೆಗಳ ನಂತರ ಚಿತ್ರಣ ಗೊತ್ತಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.
ಕಣ್ಣೂರು ಮೂಲದ 40ವರ್ಷದ ಶೈಜು ಥಾಮಸ್ ನನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.
ಶೈಜು ಥಾಮಸ್ ಕಳೆದ 12 ವರ್ಷಗಳಿಂದಲೂ ತನ್ನ ತಾಯಿ ಮತ್ತು ಸಹೋದರಿಯರಿಗೆ ಅಂಗಮಾಲಿ ಎಂಬಲ್ಲಿ ವಾಸಿಸುತ್ತಿದ್ದಾರೆ. ಅವರ ಪತ್ನಿ ನೇಪಾಳದ ಪ್ರಜೆ.
ಆರೋಪಿ ಯಾವಾಗಲೂ ಹೆಂಡತಿಯನ್ನು ಅನುಮಾನಿಸುತ್ತಿದ್ದ, ಮಗುವಿನ ತಂದೆ ಯಾರೆಂದು ಪ್ರಶ್ನಿಸುತ್ತಿದ್ದ. ಮಗುವಿಗೆ ಅನೇಕ ಬಾರಿ ಹೊಡೆದಿದ್ದ. ಇದೇ ರೀತಿಯ ದಾಳಿಯಲ್ಲಿ ಗುರುವಾರ ಮಗು ಪ್ರಜ್ಞೆ ತಪ್ಪಿತು. ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.
ಮಗು ಪರಿಸ್ಥಿತಿ ಗಂಭೀರವಾಗುತ್ತಿದೆ ಆತ ತನ್ನ ನೆರೆಮನೆಯವರ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದ. ಇದೇ ವೇಳೆ ಶೈಜು ತಾಯಿ ಮೇರಿ, ಎಂದಿಗೂ ತನ್ನಮಗ ಮಗುವಿನ ಮೇಲೆ ಹಲ್ಲೆ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.