ಭಾನುವಾರವಷ್ಟೇ ಇಡೀ ಜಗತ್ತು ಕಂಕಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಿದೆ. ಗ್ರಹಣದ ಮಜಲುಗಳನ್ನು ನೋಡುವುದಕ್ಕಿಂತ, ಆ ಅವಧಿಯಲ್ಲಿ ಏನು ಮಾಡಬೇಕು? ಮಾಡಬಾರದು ಎನ್ನುವ ಚರ್ಚೆಗಳು ಭಾರತದಲ್ಲಿ ಜೋರಾಗಿವೆ ನಡೆದಿದೆ.
ಆದರೆ ಈ ರೀತಿ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ವಿಜ್ಞಾನಿಯೊಬ್ಬರು ಗ್ರಹಣದ ಅವಧಿಯಲ್ಲಿ ಆಹಾರ ಸೇವಿಸಿದರೆ ಯಾವ ಸಮಸ್ಯೆಯಾಗುವುದಿಲ್ಲ ಎಂದು ಸಾಬೀತುಪಡಿಸಲು ಲೈವ್ ನಲ್ಲಿರುವಾಗಲೇ ಆಹಾರ ಸೇವಿಸಿರುವ ವಿಡಿಯೋ ವೈರಲ್ ಆಗಿದೆ.
ಉರ್ದು ಸಾಹಿತಿ ಹಾಗೂ ವಿಜ್ಞಾನಿ ಗೌಹಾರ್ ರಾಜಾ ಅವರು ಈ ರೀತಿ ಆಹಾರ ಸೇವಿಸುವುದಕ್ಕೆ ಕಾರಣವೆಂದರೆ, ಗ್ರಹಣದ ಫಲಾಫಲದ ಪ್ಯಾನಲ್ ಡಿಸ್ಕಷನ್ ನಡೆಯುವ ವೇಳೆ, ಗ್ರಹಣದ ಅವಧಿಯಲ್ಲಿ ಆಹಾರ ಸೇವಿಸಬಾರದು ಎಂದು ಕೆಲ ಜ್ಯೋತಿಷಿಗಳು ವಾದಿಸುತ್ತಿದ್ದರು. ಇದನ್ನು ವಿರೋಧಿಸಲು ರಾಜಾ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆದ್ದರಿಂದ ಈ ರೀತಿ ಮಾಡಿದ್ದಾರೆ. ಇದೀಗ ಈ ವಿಡಿಯೊ ವೈರಲ್ ಆಗಿದೆ.
https://www.facebook.com/devanhad181/videos/10218188757372395/?t=4