ಅತ್ತ ಚೀನಾ – ಭಾರತ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಡುತ್ತಲೇ ಭಾರತದಲ್ಲಿ ಚೀನಾ ಪ್ರೊಡೆಕ್ಟ್ ಗಳನ್ನು ಖರೀದಿಸದಂತೆ ಹಾಗೂ ಬಳಸದಂತೆ ನಿರ್ಬಂಧ ಹೇರಿ ಅಂತಾ ಅನೇಕ ಮಂದಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇತ್ತ ಕೆಲವೊಂದು ಚೀನಾ ಆಪ್ ಗಳನ್ನು ಬಳಸದಂತೆ ನಿರ್ಬಂಧ ಕೂಡ ಹೇರಲಾಗಿತ್ತು. ಇದರ ನಡುವೆ ಟಿಕ್ ಟಾಕ್ ಹಾವಳಿ ಮಾತ್ರ ಕಡಿಮೆಯಾಗಿರಲಿಲ್ಲ.
ಟಿಕ್ ಟಾಕ್ಗೆ ಸ್ಪರ್ಧೆ ಕೊಡಬೇಕಂತ ಹಾಗೂ ಜನ ಇದನ್ನು ಬಳಸಬಾರದು ಎಂದು ಭಾರತೀಯ ಮೂಲದ ಆಪ್ ಒಂದು ಬಾರೀ ಸದ್ದು ಮಾಡುತ್ತಿದೆ. ಅದೇ ಚಿಂಗಾರಿ ಆಪ್. ಚಿಂಗಾರಿ ಆಪ್ ಒಂದು ಶಾರ್ಟ್ ವಿಡಿಯೊ ತಯಾರಿಕೆ ಮತ್ತು ಹಂಚಿಕೆಯ ಅಪ್ಲಿಕೇಶನ್ ಆಗಿದೆ. ಈ ಅಪ್ಲಿಕೇಷನ್ ಗೂಗಲ್ ಪ್ಲೇ ಸ್ಟೋರ್ನಲ್ಲಿ ಸಿಗಲಿದೆ. ಇಂಗ್ಲಿಷ್, ಹಿಂದಿ, ಬಾಂಗ್ಲಾ, ಗುಜರಾತಿ, ಮರಾಠಿ, ಕನ್ನಡ, ಪಂಜಾಬಿ, ಮಲಯಾಳಂ, ತಮಿಳು ಮತ್ತು ತೆಲುಗು ಸೇರಿದಂತೆ ಒಟ್ಟು 9 ಭಾರತೀಯ ಭಾಷೆಗಳನ್ನು ಒಳಗೊಂಡಿದೆ.
ಇನ್ನು ಈ ʼಚಿಂಗಾರಿʼ ಕಳೆದ 72 ಗಂಟೆಗಳಲ್ಲಿ 5 ಲಕ್ಷಕ್ಕೂ ಅಧಿಕ ಬಾರಿ ಡೌನ್ ಲೋಡ್ ಆಗಿದೆ ಎಂದು ಹೇಳಲಾಗುತ್ತಿದೆ. ಟಿಕ್ ಟಾಕ್ ಗೆ ಸ್ಪರ್ಧೆಗೆ ಇಳಿದಿರುವ ಈ ಆಪ್ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿದೆ. ಈ ಆಪ್ ನ್ನು ಬೆಂಗಳೂರು ಮೂಲದ ಬಿಸ್ವತ್ಮಾ ನಾಯಕ್ ಮತ್ತು ಸಿದ್ಧಾರ್ಥ್ ಗೌತಮ್ ಅಭಿವೃದ್ಧಿಪಡಿಸಿದ್ದಾರೆ.