ನವದೆಹಲಿ: ಸಾರ್ವಜನಿಕ ಭವಿಷ್ಯನಿಧಿ(ಪಿಪಿಎಫ್) ಬಡ್ಡಿದರ ಮುಂದಿನವಾರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ. ಶೇಕಡ 7ಕ್ಕಿಂತ ಕೆಳಕ್ಕೆ ಬಡ್ಡಿ ದರ ಇಳಿಯುವ ಸಾಧ್ಯತೆಯಿದೆ.
ಒಂದು ವೇಳೆ ಬಡ್ಡಿದರ ಶೇಕಡ 7ಕ್ಕಿಂತ ಕಡಿಮೆಯಾದಲ್ಲಿ 1974 ರ ನಂತರ 46 ವರ್ಷಗಳಲ್ಲಿ ಮೊದಲ ಬಾರಿಗೆ ಪಿಪಿಎಫ್ ಬಡ್ಡಿದರ ಶೇಕಡ 7ಕ್ಕಿಂತ ಕಡಿಮೆ ಸಿಗಲಿದೆ. ಸಣ್ಣ ಉಳಿತಾಯ ಯೋಜನೆಗಳು, ಪಿಪಿಎಫ್ ಬಡ್ಡಿ ದರ ಪರಿಷ್ಕರಣೆ ಮಾಡಲಿದ್ದು ಮಾರ್ಚ್ ಅಂತ್ಯದಲ್ಲಿ ಪಿಪಿಎಫ್ ಬಡ್ಡಿದರವನ್ನು ಶೇಕಡಾ 7.9 ರಿಂದ ಶೇಕಡ 7.1 ಕ್ಕೆ ಇಳಿಸಲಾಗಿತ್ತು. ಈಗ ಮತ್ತೆ ಪರಿಷ್ಕರಿಸಿ 7ಕ್ಕಿಂತ ಕಡಿಮೆ ಇಳಿಯಲಿದೆ. ಉಳಿತಾಯ ಯೋಜನೆಯ ಬಡ್ಡಿ ದರಗಳನ್ನು ಇಳಿಕೆ ಮಾಡಲಾಗುವುದು ಎನ್ನಲಾಗಿದೆ.