ಕೊರೊನಾ ವೈರಸ್ ಬಂದ ಮೇಲೆ ಎಲ್ಲರ ಜೀವನದಲ್ಲೂ ಏರುಪೇರು ಕಾಣಿಸಿಕೊಂಡಿದೆ. ಸಾಲ ಮಾಡಿ ಹೋಟೆಲ್, ಬೇಕರಿ ಇಟ್ಟುಕೊಂಡವರು ಇದರಿಂದ ತುಂಬಾನೇ ಕಂಗಾಲಾಗಿದ್ದಾರೆ. ಇನ್ನು ಮಧ್ಯಮ ಹಾಗೂ ಕೂಲಿ ಕಾರ್ಮಿಕರು ಇದರಿಂದ ಕಂಗೆಟ್ಟಿದ್ದಾರೆ. ಇದೆಲ್ಲದರ ನಡುವೆ ಕೊರೊನಾ ನಮಗೆ ಒಂದಷ್ಟು ಜೀವನ ಪಾಠವನ್ನು ಕೂಡ ಕಲಿಸಿದೆ ಎಂದರೆ ತಪ್ಪಾಗಲಾರದು…!
ಒಂದು ವೈರಸ್, ಜೀವನ ಏನು ಎಂಬುದನ್ನು ತೋರಿಸಿಕೊಟ್ಟಿದೆ. ಜತೆಗೆ ಹೇಗೆ ಪ್ರಕೃತಿಯೊಂದಿಗೆ ಹೊಂದಿಕೊಂಡು ಬದುಕಬೇಕು ಎಂಬುದನ್ನು ಕೂಡ ಅರ್ಥ ಮಾಡಿಸಿದೆ. ನಾನು, ನನ್ನದು ಎನ್ನುವವರಿಗೆ ಕೊರೊನಾ, ಜೀವನ ಇಷ್ಟೇನೇ ಎಂಬ ಸತ್ಯ ಅರ್ಥ ಮಾಡಿಸಿದೆ ಅನ್ನಬಹುದು.
ಕೆಲವರಿಗೆ ಕಂಡದ್ದೆಲ್ಲಾ ತೆಗೆದುಕೊಳ್ಳುವ ಹಪಾಹಪಿ ಇರುತ್ತದೆ ಒಂದು ರೀತಿ ಕೊರೊನಾ ಇದಕ್ಕೆಲ್ಲಾ ಬ್ರೇಕ್ ಹಾಕಿದೆ. ಮನೆಯಲ್ಲಿಯೇ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ಅಚ್ಚುಕಟ್ಟಾಗಿ ಹೇಗೆ ಅಡುಗೆ ಮಾಡಬಹುದು ಎಂಬುದನ್ನು ಕಲಿಸಿಕೊಟ್ಟಿದೆ. ಹೊರಗಡೆ ಏನೇನೋ ತಿಂದು, ಸುತ್ತಾಡಿಕೊಂಡು ಇರುವವರಿಗೆ ಆರೋಗ್ಯದ ಕುರಿತು ಅರಿವು ಮೂಡಿಸಿದೆ.
ಮೊಬೈಲ್, ಟ್ಯಾಬ್ ಎಂದುಕೊಂಡು ಮುಳುಗಿದ್ದವರಿಗೆ ಸಂಬಂಧಗಳ ಬಾಂಧವ್ಯದ ಪರಿಚಯ ಮಾಡಿಸಿದೆ.
ಕೆಡುಕಿನಲ್ಲೂ ಒಳಿತನ್ನೂ ಹುಡುಕಿ ಖುಷಿ ಪಡುವುದನ್ನು ಕಲಿತರೆ ಬದುಕು ಸುಂದರಮಯವಾಗುವುದು ಅಲ್ವೇ…?