‘ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಪ್ರೀತಿಸಿದ್ದು ಇಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಿಂದೆಯೇ ಹಬ್ಬಿತ್ತು. ಆದರೆ ಅದನ್ನು ಪ್ರಭಾಸ್, ಅನುಷ್ಕಾ ಅಲ್ಲಗಳೆದಿದ್ದರು.
ಈಗ ಪ್ರಭಾಸ್ ನಟಿ ಪೂಜಾ ಹೆಗಡೆ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂದು ವದಂತಿ ಹರಡಿದೆ. ‘ಮೊಹೆಂಜೋದಾರೋ’ ಚಿತ್ರದ ಮೂಲಕ ಖ್ಯಾತರಾದ ಪೂಜಾ ಹೆಗಡೆ ಬಾಲಿವುಡ್ ಹಾಗೂ ಟಾಲಿವುಡ್ ನಲ್ಲಿ ಬಿಗ್ ಸ್ಟಾರ್ ಗಳೊಂದಿಗೆ ಅಭಿನಯಿಸಿದ್ದಾರೆ.
ಹಿಂದೆ ಹೃತಿಕ್ ರೋಷನ್ ಮತ್ತು ರೋಹನ್ ಮೆಹ್ರಾ ಅವರೊಂದಿಗೆ ಪೂಜಾ ಹೆಗಡೆ ಡೇಟಿಂಗ್ ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತಾದರೂ ಅದನ್ನು ಅವರೇ ಅಲ್ಲಗಳೆದಿದ್ದರು. ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮದುವೆ ಬಗ್ಗೆ ಎದುರಾದ ಪ್ರಶ್ನೆಗೆ ತಮ್ಮ ಕನಸಿನ ಹುಡುಗನ ಬಗ್ಗೆ ಹೇಳಿಕೊಂಡಿದ್ದರು. ಪ್ರಭಾಸ್ ಅಭಿನಯದ 20ನೇ ಚಿತ್ರಕ್ಕೆ ಪೂಜಾ ಹೆಗಡೆ ನಾಯಕಿಯಾಗಿದ್ದು, ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎನ್ನುವ ಗಾಸಿಪ್ ಹರಿದಾಡಿದೆ.