alex Certify ಕಾರಿನಲ್ಲಿದ್ದ ಹಾವನ್ನು ನೋಡಿ ಬೆಚ್ಚಿಬಿದ್ಲು ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರಿನಲ್ಲಿದ್ದ ಹಾವನ್ನು ನೋಡಿ ಬೆಚ್ಚಿಬಿದ್ಲು ಯುವತಿ

ಕಾರಿನಲ್ಲಿ ಹೋಗುತ್ತಿರುವಾಗ ಅದರೊಳಗೆ ಅಪರಿಚಿತ ಸೇರಿಕೊಂಡಿದ್ದಾನೆ ಎಂಬುದು ಗೊತ್ತಾದರೆ ನೀವೇನು ಮಾಡುತ್ತೀರ ಯೋಚಿಸಿ…? ಪೊಲೀಸರಿಗೆ ಮಾಹಿತಿ ನೀಡುವುದಿಲ್ಲವೇ..?
ಇಲ್ಲೊಬ್ಬ ಯುವತಿಗೂ ಅದೇ ಪರಿಸ್ಥಿತಿ ಎದುರಾಗಿದೆ.

ಅಂತಾರಾಜ್ಯ ಹೆದ್ದಾರಿ 44 ರಲ್ಲಿ ಹೊರಟಾಗ ಯುವತಿಯೊಬ್ಬಳಿಗೆ ಕಾರಲ್ಲಿ ಅಪರಿಚಿತ ಇರುವುದು ಗಮನಕ್ಕೆ ಬಂತು. ಆದರೆ ಮನುಷ್ಯನಲ್ಲ ಹಾವು ಆಗಿತ್ತು ಎಂಬುದೇ ಆತಂಕದ ವಿಷಯ.

ಚಾಲನಾ ಸ್ಥಳದ‌ ಬುಡದಲ್ಲೇ ಹಾವು ಸುತ್ತಿಕೊಂಡು ಮಲಗಿತ್ತು. ಅದನ್ನು ನೋಡಿ ಆಕೆ ಅಮೆರಿಕಾದ ಯುರೇಕಾ ಪೊಲೀಸರ ಸಹಾಯ ಕೇಳಿದ್ದಾರೆ. ಪೊಲೀಸರು ತಕ್ಷಣ ಸ್ಪಂದಿಸಿ ಆಗಮಿಸಿದರೇನೋ ನಿಜ.‌ ಆದರೆ, ಹಾವು ಓಡಿಸಲು ಅವರಿಗೆ ಸಾಧ್ಯವಾಗಿಲ್ಲ. ಕೆಲ ಹೊತ್ತು ಕಾದ ಅವರು ನಂತರ ಯುವತಿ ಹೇಳಿದ ಸ್ಥಳಕ್ಕೆ ಕಾರನ್ನು ಇನ್ನೊಂದು ವಾಹನದ ಸಹಾಯದಿಂದ ಎಳೆದುಕೊಂಡು ಹೋಗಿ ಬಿಟ್ಟಿದ್ದಾರೆ. ಇದನ್ನು ಯುರೇಕಾ ಪೊಲೀಸರು ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಕೆಲ ಹೊತ್ತಿನ‌ ನಂತರ ಸ್ಥಳೀಯರ ಪ್ರಯತ್ನದ ಬಳಿಕ ಹಾವು ಕಾರು ಬಿಟ್ಟು ಇಳಿದಿದೆ ಎನ್ನಲಾಗಿದೆ.‌

https://www.facebook.com/EurekaPoliceDepartment/photos/a.307642372728257/1655349524624195/?type=3

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...