ಕೊರೋನಾ ವೈರಸ್ ಸಾಂಕ್ರಮಿಕದ ಇಂದಿನ ಕಾಲಮಾನದಲ್ಲಿ ಮುಖದ ಮಾಸ್ಕ್ಗಳು ಹಾಗೂ ಶೀಲ್ಡ್ಗಳು ಮುಂಚೂಣಿ ಆರೋಗ್ಯ ಕಾರ್ಯಕರ್ತರಿಂದ ಹಿಡಿದು ಸಾಮಾನ್ಯ ಜನರವರೆಗೂ ಎಲ್ಲರಿಗೂ ಬಹಳ ಅಗತ್ಯವಾಗಿಬಿಟ್ಟಿದೆ.
ಇದೀಗ ಈ ಮುಖದ ಶೀಲ್ಡ್ಗಳಲ್ಲೂ ಸಹ ಥರಾವರಿ ವಿನ್ಯಾಸಗಳು ಬರಲು ಆರಂಭಿಸಿವೆ. ಥಾಯ್ಲೆಂಡ್ನ ಸಿಂಗಲ್ ಲೇಡಿಯೊಬ್ಬರು ಕಾರ್ಟೂನ್ ಪಾತ್ರಗಳು, ಆಟಗಳು ಹಾಗೂ ಮೂವೀ ಪಾತ್ರಗಳ ಚಿತ್ರಗಳಿರುವ ಶೀಲ್ಡ್ ಗಳನ್ನು ರಚಿಸುತ್ತಿದ್ದು, ಅವರ ಈ ಕ್ರಿಯೇಷನ್ಗೆ ಭಾರೀ ಡಿಮ್ಯಾಂಡ್ ಇದೆ.
ಪ್ರತಿಯೊಂದು ಶೀಲ್ಡ್ ಗೂ 442 ರೂ.ಗಳಷ್ಟು ಬೆಲೆ ಇದ್ದು, ಪ್ರತಿನಿತ್ಯ ಗರಿಷ್ಠ 100ರಷ್ಟು ಶೀಲ್ಡ್ಗಳಿಗೆ ಆರ್ಡರ್ಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಮಾಯ್ಸಾ ಟರೆಲ್ಡ್.