ಅತ್ಯಗತ್ಯ ಸೇವೆಗಳು ಹಾಗೂ ವಸ್ತುಗಳನ್ನು ಪೂರೈಕೆ ಮಾಡುವ ಮಂದಿಯ ಸಂಚಾರಕ್ಕೆ ಅನುವಾಗಲು ಮುಂಬೈ ಉಪನಗರ ರೈಲ್ವೇ ಸೇವೆಗಳು ಮುಂದಾಗಿವೆ. ಇದೇ ವೇಳೆ, ಈ ಉಪನಗರ ರೈಲೊಂದನ್ನು ಮಹಿಳಾ ಲೋಕೋಪೈಲಟ್ ಒಬ್ಬರು ಚಾಲನೆ ಮಾಡುತ್ತಿರುವ ಚಿತ್ರಗಳು ನೆಟ್ಟಿಗರ ಶ್ಲಾಘನೆಗೆ ಪಾತ್ರವಾಗಿವೆ.
ಮನಿಷಾ ಮ್ಹಾಸ್ಕೆ ಘೋರ್ಪಡೆ ಹೆಸರಿನ ಈ ಲೋಕೋಪೈಲಟ್ ಡ್ಯೂಟಿಯಲ್ಲಿರುವ ಚಿತ್ರವನ್ನು ಕೇಂದ್ರ ರೈಲ್ವೇ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ.
ಮುಖದ ಶೀಲ್ಡ್ ಹಾಗೂ ಮಾಸ್ಕ್ ಧರಿಸಿಕೊಂಡು ಇಲ್ಲಿನ CSMT-ಪನ್ವೆಲ್ ಮಾರ್ಗದಲ್ಲಿ ರೈಲನ್ನು ಚಾಲನೆ ಮಾಡುತ್ತಿರುವ ಈಕೆಗೆ ನೆಟ್ಟಿಗರಿಂದ ಮೆಚ್ಚುಗೆಯ ಸುರಿಮಳೆ ಬರುತ್ತಿದೆ.