ಕೊರೊನಾ ಬಂದಾಗಿನಿಂದ ಜನರಿಗೆ ಸೋಂಕಿನ ಮಾಹಿತಿ ನೀಡಲು ಹಗಲಿರುಳು ಎನ್ನದೇ ಲಕ್ಷಾಂತರ ಪತ್ರಕರ್ತರು ಶ್ರಮಿಸುತ್ತಿದ್ದಾರೆ. ಆದರೆ ಇದೇ ಕಾರ್ಯದಲ್ಲಿದ್ದ ಪತ್ರಕರ್ತನಿಗೆ ಸೋಂಕು ತಗುಲಿದಾಗ ಆತನ ಅನುಭವ ಹೇಗಿತ್ತು ಎಂದು ಬರೆದುಕೊಂಡಿದ್ದಾರೆ.
ಪಿಟಿಐ ಸುದ್ದಿ ಸಂಸ್ಥೆಯ ವರದಿಗಾರ ಮಾಣಿಕ್ ಗುಪ್ತ ಜಮ್ಮು ಮೂಲದವರಾಗಿದ್ದು, ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ದೆಹಲಿಯಿಂದ ಜಮ್ಮುವಿಗೆ ಬಂದಾಗ ಕೊರೊನಾ ಟೆಸ್ಟ್ ಪಾಸಿಟಿವ್ ಬಂದಾಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬರೆದುಕೊಂಡಿರುವ ಅವರು ಕ್ವಾರಂಟೈನ್ ನಲ್ಲಿದ್ದಾಗ ಪಾಸಿಟಿವ್ ಬಂದಿರುವುದು ತಿಳಿಯುತ್ತಿದ್ದಂತೆ ಆಘಾತವಾಯಿತು. ಹೇಗೆ ಸೋಂಕು ಅಂಟಿರಬಹುದು ಎನ್ನುವ ಅನುಮಾನದ ನಡುವೆ, ಅವರ ಅಮ್ಮನಿಗೆ ಬಿಟ್ಟು ಉಳಿದವರಿಗೆ ವಿಷಯ ಮುಟ್ಟಿಸಿ, ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಳಿಕ ಅಲ್ಲಿನ ಅವ್ಯವಸ್ಥೆ ಕಂಡು, ಸ್ನೇಹಿತರ ಸಹಾಯದಿಂದ ಖಾಸಗಿ ಆಸ್ಪತ್ರೆಗೆ ಅಲ್ಲಿಂದ ಪುನಃ ಬೇರೊಂದು ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ.
ಇನ್ನೊಂದು ಆಸ್ಪತ್ರೆಯ ವಾರ್ಡ್‌ಗೆ ಶಿಫ್ಟ್ ಆದಾಗ ಇಡೀ ವಾರ್ಡ್‌ನಲ್ಲಿ ಇವರೊಬ್ಬರೇ ಇದ್ದರಂತೆ. ಲಕ್ಷಣ ಇಲ್ಲದೇ ಇರುವುದರಿಂದ ಯಾವ ವೈದ್ಯರು ಬರುತ್ತಿರಲಿಲ್ಲ. ಈ ಸಮಯದಲ್ಲಿ ಟೈಂಪಾಸ್ ಮಾಡಲು ಫ್ಲೋರ್ ನಲ್ಲಿ ಡಾನ್ಸ್ ಮಾಡುವುದು ಅಥವಾ ಶ್ಯಾಡೋ ಕ್ರಿಕೆಟ್ ಆಡುವುದು. ಡೈರಿ ಬರೆಯುವುದು ಹಾಗೂ ಕಿಟಿಕಿಯಿಂದ ಹೊರನೋಡುವ ಮೂಲಕ ಆತಂಕ ದೂರ ಮಾಡಿಕೊಳ್ಳುತ್ತಿದರಂತೆ. ಗುಪ್ತ ಅವರ ಪ್ರಕಾರ ಮಾನಸಿಕವಾಗಿ ಗಟ್ಟಿ ಇರುವುದು ಮುಖ್ಯ. ಇದೀಗ ಎರಡನೇ ಬಾರಿ ಟೆಸ್ಟ್ ಮಾಡಿದಾಗ, ಸೋಂಕಿಲ್ಲದಿರುವುದು ಖಚಿತವಾಗಿರುವುದರಿಂದ ಬಿಡುಗಡೆಯಾಗಿದ್ದಾರೆ.