ಪೂರ್ವ ಲಡಾಖಿನ ಗಾಲ್ವನ್ ವಾಸ್ತವ ಗಡಿ ರೇಖೆ ಬಳಿ ಭಾರತ – ಚೀನಾ ಸೈನಿಕರ ನಡುವೆ ಸಂಘರ್ಷ ನಡೆದು ನಮ್ಮ 20 ಯೋಧರು ಹುತಾತ್ಮರಾದರು.
ಚೀನಾವನ್ನು ಮಣಿಸಲು ಎಣಿಸಿರುವ ಭಾರತೀಯರು, ಸ್ವದೇಶಿ ಚಳವಳಿ ಕೈಗೊಂಡಿದ್ದಾರೆ. ಚೀನಿ ವಸ್ತುಗಳ ನಾಶಕ್ಕೆ ನಾಂದಿ ಹಾಡಿದ್ದಾರೆ. ಚೀನಿ ಆ್ಯಪ್ ಗಳ ಅನ್ ಇನ್ ಸ್ಟಾಲ್ ನಡೆಯುತ್ತಿದೆ. ಆಹಾರ ವಸ್ತುಗಳ ಬಹಿಷ್ಕಾರ ಆಗುತ್ತಿದೆ. ಒಟ್ಟಾರೆ ದೇಶಾದ್ಯಂತ ಚೀನಾ ವಿರುದ್ಧ ಕಿಚ್ಚು ಹತ್ತಿದೆ.
ಪರಿಸ್ಥಿತಿ ಹೀಗಿರುವಾಗಲೇ ಉತ್ತರ ಪ್ರದೇಶದ 10 ಪೋರರು ಚೀನಾ ಗಡಿ ತಲುಪಿ ಹೋರಾಟಕ್ಕೆ ಹೊರಡಲು ಅಣಿಯಾಗಿದ್ದಾರೆ.
ಆಲಿಘಡದಿಂದ ಚೀನಾ ಗಡಿಗೆ ನಡೆದುಕೊಂಡೇ ಹೊರಟಿದ್ದ ಈ 10 ಹುಡುಗರನ್ನು ಹೆದ್ದಾರಿಯಲ್ಲೇ ಪೊಲೀಸರು ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ.
ಆಗ ತಮ್ಮೊಳಗಿನ ಕಿಚ್ಚೇನು ? ಎಲ್ಲಿಗೆ ಹೊರಟಿದ್ದೇವೆ ? ಯಾತಕ್ಕಾಗಿ ಹೋಗುತ್ತಿದ್ದೇವೆ ಎಂಬುದನ್ನೆಲ್ಲ ಬಾಯಿಬಿಟ್ಟಿದ್ದಾರೆ.
ಹೈದರ ಮಾತು ಕೇಳಿ ಪುಳಕಗೊಂಡ ಪೊಲೀಸರು, ದೇಶದ ಸೈನಿಕರಿಗೆ ಇದಕ್ಕಿಂತ ಇನ್ನೇನು ಬೇಕು ಸ್ಥೈರ್ಯ ಎಂದುಕೊಳ್ಳುತ್ತಲೇ ಸೂಕ್ತ ಸಲಹೆ – ಮಾರ್ಗದರ್ಶನ ನೀಡಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.