ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ಫುಲ್ ವೈರಲ್ ಆಗಿದ್ದು, ಬಹಳಷ್ಟು ಮಂದಿ ಶೇರ್ ಮಾಡಿದ್ದಾರೆ. ಅಷ್ಟಕ್ಕೂ ಈ ಫೋಟೋದ ವಿಶೇಷತೆ ಕೇಳಿದರೆ ನಿಮ್ಮ ಮುಖದಲ್ಲಿ ನಗು ಮೂಡದೆ ಇರಲಾರದು.
ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ಶೇಕಡ 48.80 ಅಂಕಗಳಿಸಿ ಉತ್ತೀರ್ಣರಾಗಿದ್ದು, ತನ್ನ ಈ ಯಶಸ್ಸಿಗೆ ಹರ್ಷ ವ್ಯಕ್ತಪಡಿಸಿ ಕೈ ಬೀಸುತ್ತಿದ್ದಾನೆ. ಇದಕ್ಕೆ ಆತನ ಸ್ನೇಹಿತರು ಅಭಿನಂದಿಸಿದ್ದಾರೆ.
ಹೀಗಾಗಿ ಪೋಸ್ಟರ್ ಒಂದನ್ನು ಮಾಡಿಸಿ ಅದರಲ್ಲಿ ಅತ್ಯಂತ ʼಪರಿಶ್ರಮʼ ಪಟ್ಟು ಉತ್ತೀರ್ಣನಾಗಿರುವ ವಿದ್ಯಾರ್ಥಿ ಸಂಕೇತ್ ರಾವ್ ಗೆ ಅಭಿನಂದಿಸಿದ್ದಲ್ಲದೇ ಆತ ಪಡೆದ ಶೇ.48.80 ಅಂಕದ ಪೈಕಿ 80 ದೊಡ್ಡದಾಗಿ ಮಾಡಿಸಿದ್ದಾರೆ. ಹೀಗಾಗಿ ಆತ ಶೇಕಡ 80 ಅಂಕ ಗಳಿಸಿದ್ದಾನೆ ಎಂಬಂತೆ ಭಾಸವಾಗುತ್ತಿದೆ.