alex Certify ನೀವೂ ಯೋಗಾಚರಣೆಯಲ್ಲಿ ಭಾಗಿಯಾಗಲು ಇಗೋ ಇಲ್ಲಿವೆ ಸರಳ ಆಸನಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀವೂ ಯೋಗಾಚರಣೆಯಲ್ಲಿ ಭಾಗಿಯಾಗಲು ಇಗೋ ಇಲ್ಲಿವೆ ಸರಳ ಆಸನಗಳು

ಉತ್ತರ ಗೋಳಾರ್ಧದ ಅತ್ಯಂತ ಸುದೀರ್ಘ ದಿನವಾದ ಜೂನ್ 21ರಂದು ಯೋಗ ದಿನಾಚರಣೆ ಆಚರಿಸಲು ಇಡೀ ಜಗತ್ತೇ ಉತ್ಸುಕವಾಗಿರುವುದಲ್ಲದೇ, ಕೋವಿಡ್‌-19 ಲಾಕ್‌ಡೌನ್‌ ನಡುವೆ ಜನರ ತಂತಮ್ಮ ಮನೆಗಳಲ್ಲೇ ಯೋಗಾಸನ ಮಾಡಿದ್ದಾರೆ.

2014ರಲ್ಲಿ ವಿಶ್ವ ಸಂಸ್ಥೆಗೆ ಮನವಿಯೊಂದನ್ನು ಮಾಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪ್ರತಿ ವರ್ಷ ಯೋಗ ದಿನಾಚರಣೆಯನ್ನು ಆಚರಿಸಲು ಜೂನ್ 21ರ ದಿನಾಂಕವನ್ನು ನಿಗದಿ ಮಾಡುವಂತೆ ಕೋರಿದ್ದರು. ಭಾರತದ ಈ ಮನವಿಗೆ 177 ದೇಶಗಳ ಬೆಂಬಲ ಸಿಕ್ಕಿತ್ತು.

2015ರಿಂದ ಆರಂಭಗೊಂಡಿರುವ ವಿಶ್ವ ಯೋಗ ದಿನಾಚರಣೆಯನ್ನು ಪ್ರತಿ ವರ್ಷ ಜೂನ್ 21ರಂದು ಭಾರೀ ಉತ್ಸಾಹದಿಂದ ಎಲ್ಲೆಡೆ ಆಚರಿಸಲಾಗುತ್ತಿದೆ. ಖುದ್ದು ಪ್ರಧಾನಿ ಮೋದಿ ಈ ಆಚರಣೆಯನ್ನು ಮುಂಚೂಣಿಯಲ್ಲಿ ನಿಂತು ನಡೆಸಿಕೊಡುತ್ತಾ ಬಂದಿದ್ದಾರೆ. ಭಾನುವಾರ ನೀವೂ ಸಹ ಖುಷಿಯಾಗಿ ಯೋಗಾಚರಣೆಯಲ್ಲಿ ಭಾಗಿಯಾಗಲೆಂದು, ಕೆಲವು ಸರಳ ಆಸನಗಳನ್ನು ಮಾಡುವುದು ಹೇಗೆಂದು ಈ ಕೆಳಗಿನ ಚಿತ್ರಗಳನ್ನು ನೋಡಿ ಕಲಿಯಬಹುದಾಗಿದೆ.

Yoga
Yoga
Yoga
Yoga
Yoga
Yoga
Yoga
Yoga

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...