ಕೊರೊನಾ ವೈರಸ್ ನ ಅಟ್ಟಹಾಸ ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಸಾಕಷ್ಟು ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕೊರೊನಾ ವೈರಸ್ ನಿಂದ ಪಾರಾಗಲು ಈಗ ಎಲ್ಲರೂ ಮುಸುಕುಧಾರಿಗಳಾಗಿದ್ದರೆ. ಇನ್ನೊಬ್ಬರು ಸೀನಿದಾಗ ಅಥವಾ ಶೀತ, ಕೆಮ್ಮುವಿನಿಂದ ವೈರಸ್ ಬಾರದಂತೆ ತಡೆಗಟ್ಟಲು ಈ ಮಾಸ್ಕ್ ಗಳನ್ನು ಹಾಕಿಕೊಳ್ಳಲಾಗುತ್ತದೆ. ಆದರೆ ದೊಡ್ಡವರೇನೋ ಈ ಮಾಸ್ಕ್ ಹಾಕಿಕೊಳ್ಳುತ್ತಾರೆ. ಆದರೆ ಪುಟ್ಟ ಪುಟ್ಟ ಮಕ್ಕಳ ಇದನ್ನು ಕೇಳುತ್ತಾರೆಯೇ?
ದೊಡ್ಡವರಿಗೆ ಕಿರಿಕಿರಿ ಅನಿಸುವ ಈ ಮಾಸ್ಕ್ ಧಾರಣೆ ಇನ್ನು ಪುಟ್ಟ ಮಕ್ಕಳಿಗೆ ಖುಷಿ ನೀಡುತ್ತದೆಯಾ? ಸ್ವಲ್ಪ ದೊಡ್ಡ ಮಕ್ಕಳಿಗಾದರೇ ತಿಳಿ ಹೇಳಬಹುದು ಆದರೆ ಚಿಕ್ಕಮಕ್ಕಳು ಮಾತ್ರ ಎಷ್ಟೇ ಮಾಸ್ಕ್ ಹಾಕಿದರೂ ತೆಗೆದು ಬಿಸಾಕುತ್ತಾರೆ. ಮಕ್ಕಳು ಇಷ್ಟಪಟ್ಟು ಮಾಸ್ಕ್ ಹಾಕಿಕೊಳ್ಳುವಂತೆ ಮಾಡಲು ಹೀಗೆ ಮಾಡಿ.
ಮಾಸ್ಕ್ ಮೇಲೆ ಅವರಿಷ್ಟದ ಕಾರ್ಟೂನ್ ಕ್ಯಾರೆಕ್ಟರ್ ಚಿತ್ರ ಬಿಡಿಸಿ ಕೊಡಿ. ಇಲ್ಲವೇ ಈಗ ಆನ್ ಲೈನ್ ನಲ್ಲೂ ಸಾಕಷ್ಟು ಮಕ್ಕಳಿಗಾಗಿಯೇ ಇರುವ ಮಾಸ್ಕ್ ಗಳು ಬಂದಿವೆ.
ಇನ್ನು ಬಣ್ಣ ಬಣ್ಣದ ಮಾಸ್ಕ್ ಗಳು ಅವರಿಗೆ ಕೊಡಿ. ಇದರಿಂದ ಮಕ್ಕಳು ಖುಷಿಯಾಗುತ್ತಾರೆ. ಡ್ರಾಯಿಂಗ್ ಇಷ್ಟಪಡುವ ಮಕ್ಕಳಾದರೆ ಅವರ ಹತ್ತಿರಾನೇ ಏನಾದರೂ ಮಾಸ್ಕ್ ಮೇಲೆ ಚಿತ್ರ ಬಿಡಿಸುವುದಕ್ಕೆ ಹೇಳಿ. ಇದು ಕೂಡ ಅವರು ಮಾಸ್ಕ್ ಹಾಕಿಕೊಳ್ಳುವುದಕ್ಕೆ ಸಹಾಯವಾಗುತ್ತದೆ.