ಸಾವು ಎಂಬುದು ಬಹಳ ನೋವಿನ ಸಂಗತಿಯಾದರೂ ಸಹ ಅದು ಯಾರನ್ನೂ ಬಿಡದು ಎಂಬ ವಾಸ್ತವದ ನಡುವೆಯೇ ನಾವು ಬದುಕಬೇಕು. ಆದರೆ ಕೆಲವೊಮ್ಮೆ ಈ ಸಾವು ಸಹ ಬಹಳ ನೋವು ಕೊಡುವ ರೀತಿಯಲ್ಲಿ ಘಟಿಸುತ್ತದೆ.
ಆಲಿ ಮೆಂಡೋಝಾ ಹೆಸರಿನ ಹುಡುಗಿಯೊಬ್ಬಳು ತನ್ನ ತಂದೆ ಕಳುಹಿಸಿದ ಇ-ಮೇಲ್ ಒಂದನ್ನ ನೆನೆದು ಭಾವುಕಳಾಗಿದ್ದಾಳೆ. ಏಕೆಂದರೆ, ಈ ಇ-ಮೇಲ್ ಆಕೆಯ ತಂದೆ ತೀರಿಕೊಂಡ ಹತ್ತು ತಿಂಗಳ ಬಳಿಕ ಆಕೆಯ ಮೇಲ್ ಬಾಕ್ಸ್ಗೆ ರೀಚ್ ಆಗಿದೆ.
ತನ್ನ 25ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಸ್ಪೆಷಲ್ ಆಗಿ ಆಚರಣೆ ಮಾಡುವುದು ಹೇಗೆ ಎಂದು ಪ್ಲಾನ್ ಮಾಡಿಕೊಂಡು, ಅವೆಲ್ಲವನ್ನೂ ಮೇಲ್ನಲ್ಲಿ ಬರೆದು ಹತ್ತು ತಿಂಗಳ ನಂತರ ಆಕೆಗೆ ತಲುಪುವಂತೆ ಶೆಡ್ಯೂಲ್ ಮಾಡಿದ್ದರು ಆಲಿ ತಂದೆ.
ಇದೀಗ ಆ ಇ-ಮೇಲ್ ಅನ್ನು ಅಮ್ಮ-ಮಗಳು ರಿಸೀವ್ ಮಾಡಿದ್ದು, ಬಹಳ ಭಾವುಕರಾಗಿ, ಮನದಾಳದಲ್ಲಿ ಉಕ್ಕಿ ಬಂದು ಮನೆ ಯಜಮಾನನ ನೆನಪುಗಳನ್ನು ಫೇಸ್ಬುಕ್ ಪೋಸ್ಟ್ ಒಂದರ ಮೂಲಕ ಹಂಚಿಕೊಂಡಿದ್ದಾರೆ.
https://www.facebook.com/alymndz17/posts/10215764269051152