ಟ್ವಿಟರ್ ಪ್ರಾಣಿಗಳ ವಿಡಿಯೋಗಳಿಂದ ತುಂಬಿದೆ. ಕಾಳಿಂಗ ಸರ್ಪವೊಂದಕ್ಕೆ ವ್ಯಕ್ತಿಯೊಬ್ಬ ಬಾಟಲಿಯಲ್ಲಿ ನೀರು ಕುಡಿಸುವ, ಸರ್ಪವನ್ನು ತಣ್ಣೀರಿನಿಂದ ಸ್ನಾನ ಮಾಡಿಸುವ ವಿಡಿಯೋಗಳು ಈ ಹಿಂದೆ ವೈರಲ್ ಆಗಿದ್ದವು.
ಈಗ ಹಸಿರು ಹಾವೊಂದು ಮಾನವನ ಕೈಯಿಂದ ನೀರು ಕುಡಿಯುವ ವಿಡಿಯೋ ವೈರಲ್ ಆಗಿದೆ.
ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಅವರು ಜೂನ್ 18 ರಂದು ವಿಡಿಯೋ ಅಪ್ ಲೋಡ್ ಮಾಡಿದ್ದಾರೆ.
“ನಾಲಿಗೆಯಿಂದ ನೀರು ಕುಡಿಯಲು ಆ ಹಾವಿಗೆ ದವಡೆಗಳು ಸಹಕಾರ ಮಾಡುತ್ತಿಲ್ಲ. ಇದರಿಂದ ಸ್ವಲ್ಪವೇ ನೀರು ಸೇವಿಸಿ ವಾಪಸ್ ದವಡೆಯನ್ನು ಲಾಕ್ ಮಾಡಿ ನೀರನ್ನು ಹೊಟ್ಟೆಗೆ ಸೇರಿಸಲು ಹಾವು ಪ್ರಯತ್ನಿಸುತ್ತಿದೆ” ಎಂದು ನಂದಾ ಅವರು ಬರೆದಿದ್ದಾರೆ. ಇಂಥ ಅಪರೂಪದ ವಿಡಿಯೋ ಎಂದೂ ನೋಡಿರಲಿಲ್ಲ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಹಸಿರು ಹಾವು ಅತ್ಯಂತ ನಿರಪಾಯಕಾರಿ ಪ್ರಾಣಿ. ಮಾನವನನ್ನು ಕಚ್ಚುವುದಿಲ್ಲ. ವಿಷವೂ ಇಲ್ಲ. ಹುಳುಗಳನ್ನು ತಿಂದು ಜೀವಿಸುವ ರೈತ ಸ್ನೇಹಿಯಾಗಿದೆ. ಆದರೆ, ವಾಹನದ ಚಕ್ರಕ್ಕೆ, ಜನರ ವಿಕೃತಿಗೆ ಸಿಕ್ಕಿ ಇವುಗಳು ಕಣ್ಮರೆಯಾಗುತ್ತಿದ್ದು, ಪ್ರಭೇದವೇ ಅಳಿವಿನ ಅಂಚಿಗೆ ತಲುಪಿದೆ.
https://twitter.com/susantananda3/status/1273624772815933441?ref_src=twsrc%5Etfw%7Ctwcamp%5Etweetembed%7Ctwterm%5E1273624772815933441&ref_url=https%3A%2F%2Fwww.indiatoday.in%2Ftrending-news%2Fstory%2Fviral-video-of-snake-drinking-water-from-human-s-palm-leaves-twitter-amazed-1690567-2020-06-19