ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಬಾಲಿವುಡ್ ಚಿತ್ರರಂಗದ ಒಂದೊಂದೇ ಹುಳುಕುಗಳು ಹೊರಬರುತ್ತಿವೆ. ಬಾಲಿವುಡ್ ನಲ್ಲಿ ಸ್ವಜನ ಪಕ್ಷಪಾತ, ಕುಟುಂಬ ವ್ಯಾಮೋಹ ಹೆಚ್ಚಾಗಿದ್ದು, ಹೀಗಾಗಿ ಹೊರಗಿನವರು ಚಿತ್ರರಂಗದಲ್ಲಿ ಬೆಳೆಯಲು ಬಿಡುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಇದರ ಮಧ್ಯೆ ‘ದಬಾಂಗ್’ ಚಿತ್ರದ ನಿರ್ದೇಶಕ ಅಭಿನವ್ ಕಶ್ಯಪ್, ಖ್ಯಾತ ನಟ ಸಲ್ಮಾನ್ ಖಾನ್ ಕುಟುಂಬ ಸದಸ್ಯರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಸಲ್ಮಾನ್ ಸಹೋದರರು ತಮಗೆ ಮಾನಸಿಕ ಕಿರುಕುಳ ನೀಡಿದ್ದರಿಂದ ತೀವ್ರ ತೊಂದರೆ ಅನುಭವಿಸಬೇಕಾಯಿತು ಎಂದು ಹೇಳಿದ್ದರು.
ಅಭಿನವ್ ಕಶ್ಯಪ್ ಅವರ ಆರೋಪಗಳಿಂದ ಆಕ್ರೋಶಗೊಂಡಿರುವ ಸಲ್ಮಾನ್ ಕುಟುಂಬ ಇದೀಗ ಮಾನನಷ್ಟ ಮೊಕದ್ದಮೆ ಹೂಡಲು ಮುಂದಾಗಿದ್ದು, ಸಲ್ಮಾನ್ ಸಹೋದರ ಸೊಹೈಲ್ ಖಾನ್ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಅಭಿನವ್ ಕಶ್ಯಪ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮತ್ತೊಬ್ಬ ಸಹೋದರ ಅರ್ಬಾಜ್ ಖಾನ್ ಹೇಳಿದ್ದಾರೆ.