ಕೊರೊನಾ ಲಾಕ್ಡೌನ್ ಕಾರಣಕ್ಕೆ ವ್ಯಾಪಾರ-ವಹಿವಾಟಿಲ್ಲದೆ ಆರ್ಥಿಕವಾಗಿ ಸಂಕಷ್ಟಕ್ಕೊಳಗಾಗಿದ್ದ ಸಾರ್ವಜನಿಕರ ನೆರವಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂ ವಹಿವಾಟಿನ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ರದ್ದು ಪಡಿಸಿತ್ತು.
ಹೀಗಾಗಿ ಬ್ಯಾಂಕ್ ಗ್ರಾಹಕರು ಯಾವುದೇ ಎಟಿಎಂಗಳಲ್ಲಿ ಹಣ ಹಿಂಪಡೆದರೂ ಸಹ ಶುಲ್ಕ ಕಡಿತವಾಗುತ್ತಿರಲಿಲ್ಲ. ಆದರೆ ಇದೀಗ 5000 ರೂ. ಅಥವಾ ಅದಕ್ಕೂ ಹೆಚ್ಚಿನ ಮೊತ್ತವನ್ನು ಹಿಂಪಡೆದ ವೇಳೆ ಗ್ರಾಹಕರಿಗೆ 24 ರೂಪಾಯಿ ಶುಲ್ಕ ವಿಧಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೇಮಕ ಮಾಡಿದ್ದ ಸಮಿತಿ ಈ ಶಿಫಾರಸ್ಸನ್ನು ಮಾಡಿದ್ದು, ಜೊತೆಗೆ ಜನಸಂಖ್ಯೆ ಆಧಾರಿತವಾಗಿ ಎಟಿಎಂ ಇಂಟರ್ಚೇಂಜ್ ಶುಲ್ಕ ವಿಧಿಸಲು ತಿಳಿಸಿದೆ ಎನ್ನಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಶಿಫಾರಸ್ಸನ್ನು ಅಂಗೀಕರಿಸಿದರೆ ಎಟಿಎಂ ವಹಿವಾಟುಗಳಿಗೆ ಗ್ರಾಹಕರು ಶುಲ್ಕ ಭರಿಸಬೇಕಾಗುತ್ತದೆ.