ಸೂಪರ್ ರೇಸರ್ ರೇನಿ ಗ್ರೇಸಿ ವಯಸ್ಕರ ಚಿತ್ರಗಳಲ್ಲಿ ನಟಿಸಲು ಶುರು ಮಾಡಿದ್ದಾರೆ ಎಂಬುದು ಹಳೆಯ ಸುದ್ದಿ, 25 ವರ್ಷದ ವಯಸ್ಸಿನ ಈ ನಟಿಯ ಚಿತ್ರಗಳಿಗೆ ಎಡತಾಕಿ ಅಂತರ್ಜಾಲದಲ್ಲಿ ಭಾರೀ ಶೋಧನೆಗಳೇ ನಡೆಯುತ್ತಿವೆ.
ಇದೀಗ ಆಕೆಗೆ ಕೆಲವರ ಮೇಲೆ ವಿಪರೀತ ಸಿಟ್ಟು ಬಂದಿದೆ. ಏಕೆ ಗೊತ್ತೇ?
ತನ್ನ ಚಿತ್ರಗಳನ್ನೆಲ್ಲ ಆಕೆ ಕಾಪಿರೈಟ್ ಅಡಿ ಪೇಯ್ಡ್ ಜಾಲತಾಣವೊಂದರಲ್ಲಿ ಹಾಕಿಕೊಂಡಿದ್ದಾಳೆ. ಆದರೆ, ಭಾರತೀಯರ ಪೈಕಿ ಕೆಲ ’ಆಸಕ್ತರು’ ಆಕೆಯ ಚಿತ್ರಗಳನ್ನು ಗೂಗಲ್ ಮಾಡಿ ಸರ್ಚ್ ಮಾಡಿದ್ದಾರೆ. ಅಲ್ಲಿ ಸಿಕ್ಕ ಆಕೆಯ ಕೆಲ ಚಿತ್ರಗಳನ್ನು ವೈರಲ್ ಮಾಡಿದ್ದಾರೆ.
“ನನ್ನ ಚಿತ್ರಗಳು ಭಾರತದಲ್ಲಿ ವೈರಲ್ ಆದ ಘಳಿಗೆಯಿಂದ, ನನ್ನ ಹೆಸರಿನಲ್ಲಿ ಸಿಕ್ಕಾಪಟ್ಟೆ ನಕಲಿ ವಿಡಿಯೋಗಳು ಹಾಗೂ ಪ್ರೊಫೈಲ್‌ಗಳನ್ನು ಸೃಷ್ಟಿಸಲಾಗಿದೆ. ನೀವು ಭಾರತೀಯರಾಗಿದ್ದಲ್ಲಿ, ನನ್ನ ಪೇಜ್‌ನಿಂದ ಹೊರಗೆ ನಡೆಯಿರಿ. ನಿಮಗೆ ಇಲ್ಲಿ ಸ್ವಾಗತವಿಲ್ಲ. ನನ್ನ ಚಿತ್ರಗಳನ್ನು ಕದಿಯುವುದನ್ನು ಮೊದಲು ನಿಲ್ಲಿಸಿ” ಎಂದಿದ್ದಾಳೆ ಗ್ರೇಸಿ. ಹೀಗೇ ಮಾಡಿದಲ್ಲಿ, ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿಯೂ ಬೆದರಿಕೆ ಹಾಕಿದ್ದಾಳೆ ಈ ನಟಿ.
https://www.instagram.com/p/B8qAsk_pMSC/?utm_source=ig_embed