ಕೇಕ್ ಎಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತದೆ. ಇಲ್ಲಿ ಬಾಳೆಹಣ್ಣು ಹಾಗೂ ಚಾಕೋಲೇಟ್ ಚಿಪ್ಸ್ ಬಳಸಿಕೊಂಡು ಸುಲಭವಾಗಿ ಮಾಡಬಹುದಾದ ಕೇಕ್ ಇದೆ. ಮಕ್ಕಳಿಗೆ ಮಾಡಿಕೊಡಿ.
ಬೇಕಾಗುವ ಸಾಮಗ್ರಿಗಳು:
½ ಕಪ್- ಬೆಣ್ಣೆ, ½ ಕಪ್ –ಬ್ರೌನ್ ಶುಗರ್, ¼ ಕಪ್ ಸಕ್ಕರೆ, 1-ಮೊಟ್ಟೆ, 2 ಟೀ ಸ್ಪೂನ್- ವೆನಿಲ್ಲಾ ಎಸೆನ್ಸ್, 3 ಬಾಳೆಹಣ್ಣು, 1 ಕಪ್- ಮೈದಾ, ½ ಕಪ್-ಕೊಕೋ ಪೌಡರ್, 1 ಟೀ ಸ್ಪೂನ್ ಬೇಕಿಂಗ್ ಸೋಡಾ, ½ ಟೀ ಸ್ಪೂನ್-ಉಪ್ಪು, 1 ಕಪ್- ಚಾಕೋಲೇಟ್ ಚಿಪ್ಸ್.
ಮಾಡುವ ವಿಧಾನ:
ಒಂದು ಬೌಲ್ ಗೆ ಬೆಣ್ಣೆ ಹಾಗೂ ಸಕ್ಕರೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇನ್ನೊಂದು ಬೌಲ್ ಗೆ ಬಾಳೆಹಣ್ಣು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ನಂತರ ಒಂದು ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಇದನ್ನು ಬೆಣ್ಣೆ ಹಾಗೂ ಸಕ್ಕರೆ ಮಿಶ್ರಣವಿರುವ ಪಾತ್ರೆಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಒಂದು ಪಾತ್ರೆಗೆ ಮೈದಾ ಹಿಟ್ಟು ಕೊಕೊಪೌಡರ್, ಬೇಕಿಂಗ್ ಸೋಡಾ, ಉಪ್ಪು ಸೇರಿಸಿ ಮಿಕ್ಸ್ ಮಾಡಿಕೊಳ್ಳಿ ಇದಕ್ಕೆ ಸಕ್ಕರೆ ಬೆಣ್ಣೆ ಮಿಶ್ರಣವಿರುವುದನ್ನೆಲ್ಲಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕೇಕ್ ಮೌಲ್ಡ್ ಗೆ ಹಾಕಿ ನಂತರ ಇದರ ಮೇಲೆ ಚಾಕೋಚಿಪ್ಸ್ ಉದುರಿಸಿ. ಪ್ರಿ ಹೀಟ್ ಮಾಡಿಟ್ಟುಕೊಂಡ ಓವೆನ್ ನಲ್ಲಿ 30 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.