ಹೂಸು ಬಿಡುವುದು ಸಾಮಾನ್ಯ ಸಂಗತಿಯೇ. ಆಹಾರದ ವ್ಯತ್ಯಾಸದಿಂದಾಗಿ ಪ್ರತಿಯೊಬ್ಬರ ದೇಹದಲ್ಲಿ ಆಗುವ ಬದಲಾವಣೆಯಿಂದ ಗ್ಯಾಸ್ ಹೊರಹೋಗುತ್ತದೆ.
ಹೂಸು ಬಿಟ್ಟಿದ್ದಕ್ಕಾಗಿ ವ್ಯಕ್ತಿಯೊಬ್ಬರಿಗೆ ಆಸ್ಟ್ರಿಯನ್ ಪೊಲೀಸರು ಐನೂರು ಯೂರೋ ದಂಡ ವಿಧಿಸಿ ಅಚ್ಚರಿ ಮೂಡಿಸಿದ್ದಾರೆ.
ವಿಯೆನ್ನಾದಲ್ಲಿ ನಾಕಾಬಂದಿ ವೇಳೆ ಗುರುತು ಪರೀಕ್ಷಿಸಲು ತಡೆದ ಸಂದರ್ಭದಲ್ಲಿ ವ್ಯಕ್ತಿ ಹೂಸು ಬಿಟ್ಟಿದ್ದಾನೆ. ಅದರೆ ಉದ್ದೇಶಪೂರ್ವಕವಾಗಿ ಹೊಸು ಬಿಟ್ಟಿದ್ದಾನೆ ಎಂಬುದು ಪೊಲೀಸರ ಆರೋಪವಾಗಿದೆ ಜೊತೆಗೆ ಅದನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು ಜನತೆ ದಂಡ ಹಾಕಿದ್ದನ್ನು ಟೀಕಿಸಿದರೆ ಪೊಲೀಸರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಪರಿಶೀಲನೆಗೆ ಬಂದ ಅಧಿಕಾರಿಗೆ ಅಸಹಕಾರ ತೋರಿದ ವ್ಯಕ್ತಿ, ಅಧಿಕಾರಿಯತ್ತ ನೋಡುತ್ತಲೇ ಉದ್ದೇಶಪೂರ್ವಕವಾಗಿ ಹೂಸು ಬಿಟ್ಟಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ಜೊತೆಗೆ ಆತ ಬೇಕಿದ್ದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ದಂಡವನ್ನು ಪ್ರಶ್ನಿಸಬಹುದು ಎಂದು ಹೇಳಿದ್ದಾರೆ.