alex Certify ಅಚ್ಚರಿಗೆ ಕಾರಣವಾಗಿದೆ ಆಕಾಶಕಾಯದಲ್ಲಿ ಕಂಡ ಬೆಳಕಿನ ಉಂಡೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಚ್ಚರಿಗೆ ಕಾರಣವಾಗಿದೆ ಆಕಾಶಕಾಯದಲ್ಲಿ ಕಂಡ ಬೆಳಕಿನ ಉಂಡೆ…!

ವಿಶ್ವದಲ್ಲಿ ಮನುಷ್ಯರಿಗೆ ತಿಳಿಯದ ಹಲವು ಅಚ್ಚರಿಯ ಘಟನೆಗಳು ನಡೆಯುತ್ತಿರುತ್ತವೆ. ಅದರಲ್ಲೂ ಆಕಾಶಕಾಯದಲ್ಲಿ ನಡೆಯುವ ಅನೇಕ ಸಂಗತಿಗಳಿಗೆ ನಮ್ಮ ಬಳಿ ಈಗಲೂ ಉತ್ತರವಿಲ್ಲ. ಇದೀಗ ಇದೇ ರೀತಿಯ ಅಚ್ಚರಿಯ ಘಟನೆಯೊಂದು ನಡೆದಿದೆ.\

ಅಮೆರಿಕದ ವಾಯುಪಡೆ ಚಿತ್ರೀಕರಿಸಿರುವ, ಪೆಂಟಗಾನ್‌ನಿಂದ ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಕಳೆದ ಕೆಲ ತಿಂಗಳ ಹಿಂದೆ ಅಮೆರಿಕ, ಯುಕೆ ಭಾಗದಲ್ಲಿ ಹಸಿರು ಬಣ್ಣ ಬೆಂಕಿಯ ಉಂಡೆಯ ಆಕಾರದ ಬೆಳಕೊಂದು ಆಕಾಶದಲ್ಲಿ ಕಾಣಿಸಿಕೊಂಡಿದೆ. ಕೆಲವರು ಇದನ್ನು ಏಲಿಯನ್‌ ಎಂದರೆ, ಇನ್ನು ಅನೇಕರು ಇದೇನು ಎನ್ನುವುದನ್ನು ಪತ್ತೆ ಹಚ್ಚಬೇಕು ಎಂದಿದ್ದಾರೆ.

ಈ ವಿಡಿಯೊ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪೆಂಟಗಾನ್‌, ಜನರಲ್ಲಿ ಇರುವ ತಪ್ಪು ಕಲ್ಪನೆಯನ್ನು ದೂರಾಗಿಸಲು ಈ ವಿಡಿಯೊಗಳನ್ನು ನೀಡಲಾಗಿದೆ. ಇದು ಆಕಾಶದಲ್ಲಿ ಉತ್ತರ ಸಿಗದ ನೈಸರ್ಗಿಕ ಪ್ರಕ್ರಿಯೆ ಎಂದು ಹೇಳಿದೆ.

ಇದೇ ರೀತಿಯ ವಿಡಿಯೊ ಆಸ್ಟ್ರೇಲಿಯಾ, ಯುಕೆ, ಅಮೆರಿಕ ಸೇರಿದಂತೆ ಹಲವೆಡೆ ಕಾಣಸಿಕೊಂಡಿತ್ತು. ಈ ಬಗ್ಗೆ ತಜ್ಞರು ಮಾತನಾಡಿದ್ದು, ಪ್ರತಿನಿತ್ಯ ನೂರಾರು ಟನ್‌ ಆಕಾಶಕಾಯದ ಡೆಬ್ರಿಸ್‌ ಭೂಮಿಗೆ ಬಂದು ಬೀಳುತ್ತವೆ. ಇದರಲ್ಲಿ ಬಹುತೇಕ ಸಮುದ್ರದಲ್ಲಿ ಅಥವಾ ಜನರಿಲ್ಲದ ಪ್ರದೇಶದಲ್ಲಿ ಬೀಳುವುದರಿಂದ ಈ ಬಗ್ಗೆ ಚರ್ಚೆಯಾಗುವುದಿಲ್ಲ. ಇದರೊಂದಿಗೆ ಅನೇಕ ಬಾರಿ ಬೆಳಗ್ಗೆಯ ಸಮಯದಲ್ಲಿ ಈ ಘಟನೆ ನಡೆದರೆ ಕಾಣಿಸುವುದಿಲ್ಲ. ಆಕಾಶದಲ್ಲಿ ನಡೆಯುವ ಇನ್ನು ನೂರಾರು ಬದಲಾವಣೆಗೆ ಮಾನವನ ಬಳಿ ಉತ್ತರ ಸಿಕ್ಕಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ.

https://www.youtube.com/watch?time_continue=1&v=OBZxmEjlXWI&feature=emb_logo

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...