alex Certify ಬಿಗ್ ಸಕ್ಸಸ್…! ಕೊರೊನಾಗೆ ಸಿಕ್ತು ಮದ್ದು, ಸೋಂಕಿತರನ್ನು ಸಾವಿನಿಂದ ಪಾರು ಮಾಡಿದೆ ಕಡಿಮೆ ಬೆಲೆಯ ಈ ಸಂಜೀವಿನಿ..!! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್ ಸಕ್ಸಸ್…! ಕೊರೊನಾಗೆ ಸಿಕ್ತು ಮದ್ದು, ಸೋಂಕಿತರನ್ನು ಸಾವಿನಿಂದ ಪಾರು ಮಾಡಿದೆ ಕಡಿಮೆ ಬೆಲೆಯ ಈ ಸಂಜೀವಿನಿ..!!

ಲಂಡನ್: ವಿಶ್ವದೆಲ್ಲೆಡೆ ಮಾರಕ ಕೊರೊನಾ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಲಕ್ಷಾಂತರ ಮಂದಿ ಬಲಿಯಾಗಿದ್ದಾರೆ.

ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ಔಷಧ ಕಂಡುಹಿಡಿಯುವಲ್ಲಿ ಅನೇಕ ಸಂಶೋಧಕರು ನಿರಂತರ ಪ್ರಯತ್ನ ನಡೆಸಿದ್ದಾರೆ. ಆದರೆ ಸದ್ಯಕ್ಕಂತೂ ಕೊರೊನಾಗೆ ಪರಿಣಾಮಕಾರಿ ಔಷಧಿ ಲಭ್ಯವಿಲ್ಲ. ಬೇರೆ ಬೇರೆ ಔಷಧ ಬಳಸಿಕೊಂಡು ಕೊರೊನಾ ತಡೆಯುವ ಪ್ರಯತ್ನ ಮುಂದುವರೆದಿದೆ.

ಹೀಗಿರುವಾಗಲೇ ಆಶಾದಾಯಕ ಹೊಸ ಬೆಳವಣಿಗೆಯೊಂದು ನಡೆದಿದೆ. ಇಂಗ್ಲೆಂಡ್ ಸಂಶೋಧಕರು ಬಳಸಿದ ಔಷಧದ ಮೂಲಕ ಕೊರೊನಾ ಗುಣಪಡಿಸಬಹುದಾಗಿದೆ ಎಂದು ಹೇಳಲಾಗಿದೆ. ಕೊರೊನಾ ಸೋಂಕಿತರಿಗೆ ಡೆಕ್ಸಾಮೆಥಾಸೋನ್(Dexamethasone) ನೀಡಿದಲ್ಲಿ ಗುಣಮುಖರಾಗುತ್ತಾರೆ ಎಂದು ಇಂಗ್ಲೆಂಡ್ ಸಂಶೋಧಕರು ಹೇಳಿದ್ದಾರೆ.

ಸಾವಿಗೆ ಸನಿಹವಾಗಿದ್ದ 5 ಸಾವಿರ ಕೊರೊನಾ ಸೋಂಕಿತರನ್ನು ಡೆಕ್ಸಾಮೆಥಾಸೋನ್ ಔಷಧ ನೀಡುವ ಮೂಲಕ ಸಾವಿನ ದವಡೆಯಿಂದ ಪಾರು ಮಾಡಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನ ತಂಡವೊಂದು ಡೆಕ್ಸಾಮೆಥಾಸೋನ್ ಔಷಧ ಬಳಸಿ ಪರಿಣಾಮಕಾರಿ ಅಧ್ಯಯನ ನಡೆಸಿ ವರದಿ ನೀಡಿದೆ.

ಈ ತಂಡದಲ್ಲಿದ್ದ ಪ್ರೊ. ಪೀಟರ್ ಹಾರ್ಬಿ ಡೆಕ್ಸಾಮೆಥಾಸೋನ್ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಿದೆ. ಕೊರೋನಾ ತಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.

ಅಂದ ಹಾಗೇ, ಕಡಿಮೆ ಬೆಲೆಯ ಡೆಕ್ಸಾಮೆಥಾಸೋನ್ ಔಷಧ ವಿಶ್ವದೆಲ್ಲೆಡೆ 1960ರಿಂದ ಬಳಕೆ ಮಾಡಲಾಗುತ್ತಿದೆ. ಅಸ್ತಮಾ ಸೇರಿದಂತೆ ಹಲವು ರೋಗಿಗಳಿಗೆ ಇದನ್ನು ಬಳಸುತ್ತಿದ್ದು, ಕೊರೊನಾಗೆ ಪರಿಣಾಮಕಾರಿಯಾಗಿದೆ. ಸದ್ಯ ಕೊರೋನಾ ತಡೆಗೆ ಹೆಚ್ಚಾಗಿ ಬಳಸುತ್ತಿರುವ ಹೈಡ್ರಾಕ್ಸಿಕ್ಲೊರೋಕ್ವಿನ್ ನಿಂದ ಅಡ್ಡ ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಔಷಧದ ಕುರಿತೂ ಅಪಸ್ವರಗಳಿದ್ದು, ಅಧಿಕೃತ ಪ್ರಕಟಣೆ ಬಳಿಕವಷ್ಟೇ ಖಚಿತಗೊಳ್ಳಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...