ಲಡಾಖ್ ನಲ್ಲಿ ಚೀನಾ ಮತ್ತು ಭಾರತ ಸೈನಿಕರ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘರ್ಷಣೆಯಲ್ಲಿ ತೆಲಂಗಾಣದ ಓರ್ವ ಕರ್ನಲ್ ಹುತಾತ್ಮರಾಗಿದ್ದಾರೆ.
ಸೂರ್ಯಪೇಟೆ ನಿವಾಸಿ ಸಂತೋಷ್ ಕುಮಾರ್ ಮೃತಪಟ್ಟಿದ್ದಾರೆ. ಅವರ ಕುಟುಂಬದವರಿಗೆ ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲಡಾಖ್ ನಲ್ಲಿ ಭಾರತದ ಹಲವು ಯೋಧರು ನಾಪತ್ತೆಯಾಗಿದ್ದು ಭಾರತದ ಸೈನಿಕರನ್ನು ಚೀನಾ ಹಿಡಿದಿಟ್ಟುಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಅಲ್ಲದೇ, ಭಾರತದ ಸೈನಿಕರನ್ನು ಬೆಟ್ಟದಿಂದ ತಳ್ಳಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದೆ. ಸೋಮವಾರ ರಾತ್ರಿ ಲಡಾಖ್ ನ ಪೂರ್ವಭಾಗದ ಕಣಿವೆಯಲ್ಲಿ ಘರ್ಷಣೆ ನಡೆದಿದ್ದು ಭಾರತ ಸೇನಾಪಡೆಯ ಅಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ.