ಬಾಲಿವುಡ್ ನಟಿ ರೇಖಾ ಎಂದಾಕ್ಷಣ ನೆನಪಾಗುವುದೇ ಅವರ ಅದ್ಭುತ ಸೌಂದರ್ಯ. ವಯಸ್ಸಾದರೂ ರೇಖಾ ಚೆಲುವು ಒಂದಿನಿತೂ ಹಾಳಾಗದಂತೆ ಕಾಪಾಡಿಕೊಂಡಿದ್ದಾರೆ. ತನ್ನ ಮುಖದ ಸೌಂದರ್ಯ ಕಾಪಾಡಿಕೊಳ್ಳುವುದಕ್ಕೆ ರೇಖಾ ಏನ್ನೆಲ್ಲಾ ಮಾಡುತ್ತಾರೆ ಗೊತ್ತೇ…?
ನಟಿ ರೇಖಾ ತಮ್ಮ ಮುಖವನ್ನು ಕ್ಲೆನ್ಸಿಂಗ್, ಟೋನಿಂಗ್, ಮಾಯಿಶ್ಚರೈಸಿಂಗ್ ಮಾಡುವುದನ್ನು ತಪ್ಪಿಸುವುದಿಲ್ಲವಂತೆ. ಇದರಿಂದ ಮುಖದಲ್ಲಿನ ಕೊಳೆ ನಿವಾರಣೆಯಾಗುತ್ತದೆ. ಹಾಗೇ ತ್ವಚೆ ಕೂಡ ಆರೋಗ್ಯಯುತವಾಗಿರುತ್ತದೆ.
ಹಾಗೇ ತಮ್ಮ ಕೂದಲಿಗೆ ಮನೆಯಲ್ಲಿಯೇ ಇರುವ ವಸ್ತುಗಳನ್ನು ಉಪಯೋಗಿಸಿಕೊಂಡು ಹೇರ್ ಪ್ಯಾಕ್ ಅನ್ನು ಹಾಕಿಕೊಳ್ಳುತ್ತಾರಂತೆ. ಇದರಿಂದ ಅವರ ಕೂದಲು ಕೂಡ ಕಾಂತಿಯುತವಾಗಿದೆ.
ಇನ್ನು ದಿನಕ್ಕೆ 12 ಗ್ಲಾಸ್ ನೀರು ಕುಡಿಯುವುದನ್ನು ರೇಖಾ ಮಿಸ್ ಮಾಡಿಕೊಳ್ಳುವುದಿಲ್ಲ. ಇದರ ಜತೆಗೆ ದೇಹ ಫಿಟ್ ಆಗಿರಲು ಡಾನ್ಸ್ ಹಾಗೂ ಯೋಗವನ್ನು ಕೂಡ ಮಾಡುತ್ತಾರೆ.