ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ನಡುವೆ ಲಿಂಕ್ ಮಾಡುವುದು ಕಡ್ಡಾಯ. ಲಿಂಕ್ ಮಾಡಿಕೊಳ್ಳಲು ಹಲವು ಬಾರಿ ಕಾಲಾವಕಾಶವನ್ನು ಕೇಂದ್ರ ಸರ್ಕಾರ ನೀಡಿತ್ತು.
ಆಧಾರ್ – ಪಾನ್ ಲಿಂಕ್ ಮಾಡುವ ದಿನಾಂಕವನ್ನು 2020 ಮಾರ್ಚ್ 31 ರಿಂದ, 2020 ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ನಿಮ್ಮ ಪ್ಯಾನ್ ಕಾರ್ಡ್ ಅನ್ನು ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿಕೊಳ್ಳಲು ಇನ್ನೂ ಕೆಲವು ದಿನಗಳು ಉಳಿದಿವೆ. ಲಿಂಕ್ ಮಾಡುವುದು ಹೇಗೆ? ಯಾವ ಕಚೇರಿಗೆ ಅಲೆಯಬೇಕು ಎಂಬ ಚಿಂತೆ ಬೇಡ. ಅತಿಸರಳ ಸ್ಟೆಪ್ ಗಳಲ್ಲಿ ಮಾಡಬಹುದಾಗಿದೆ.
ಈಗ ಪ್ಯಾನ್ ಕಾರ್ಡ್‌ನೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ತುಂಬಾ ಸುಲಭ. ಹಾಗೆ ಮಾಡಲು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ನೀವು ಎಸ್ ಎಂಎಸ್ ಕಳುಹಿಸಬೇಕಾಗುತ್ತದೆ.
ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಯುಐಡಿಪಿಎಎನ್ <ನಿಮ್ಮ 12 ಅಂಕೆ ಆಧಾರ್ ಸಂಖ್ಯೆ> <ನಿಮ್ಮ 10 ಅಂಕೆ ಪಾನ್> ಎಂದು ಟೈಪ್ ಮಾಡಿ ಮತ್ತು ಅದನ್ನು 567678 ಅಥವಾ 56161 ಗೆ ಕಳುಹಿಸಿ.
ಉದಾಹರಣೆಗೆ, ನಿಮ್ಮ ಆಧಾರ್ ಸಂಖ್ಯೆ 123456789101 ಮತ್ತು ನಿಮ್ಮ ಪ್ಯಾನ್ BSELF9343J ಆಗಿದ್ದರೆ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ನೀವು UIDPAN 123456789101 BSELF9343J ಅನ್ನು ಟೈಪ್ ಮಾಡಿ 567678 ಅಥವಾ 56161 ಗೆ ಸಂದೇಶವನ್ನು ಕಳುಹಿಸಬೇಕು.