
ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ತುರ್ತಿನ ಈ ಸಂದರ್ಭದಲ್ಲಿ ಬ್ಯುಸಿನೆಸ್ ನಡೆಸುವವರು ತಂತಮ್ಮ ಗ್ರಾಹಕರಿಗೆ ಸೇವೆ ಹಾಗೂ ಸರಕುಗಳನ್ನು ಪೂರೈಸುವ ವೇಳೆ ಸಾಧ್ಯವಾದಷ್ಟು ಹೊಸ ರೀತಿಯ ಆವಿಷ್ಕಾರೀ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ.
ಕೊಳವೆಯೊಂದರ ಮೂಲಕ ಗ್ರಾಹಕರಿಗೆ ಮದ್ಯದ ಬಾಟಲಿಗಳನ್ನು ಪೂರೈಕೆ ಮಾಡಿ, ಹಾಗೇ ಪೇಮೆಂಟ್ ಪಡೆಯುತ್ತಿರುವ ಮದ್ಯದಂಗಡಿಯೊಂದರ ವಿಡಿಯೋವನ್ನು ಮೆಚ್ಚಿಕೊಂಡಿರುವ ಉದ್ಯಮಿ ಆನಂದ್ ಮಹಿಂದ್ರಾ, ಟ್ವಿಟರ್‌ನಲ್ಲಿ ತಮ್ಮನ್ನು ಫಾಲೋ ಮಾಡುವ 7 ದಶಲಕ್ಷ ಮಂದಿಯೊಂದಿಗೆ ಇದನ್ನು ಶೇರ್ ಮಾಡಿಕೊಂಡಿದ್ದಾರೆ.
ಈ ರೀತಿಯ ಕಾಂಟಾಕ್ಟ್‌ಲೆಸ್ ಡೆಲಿವರಿ ವ್ಯವಸ್ಥೆ ಮುಂದಿನ ದಿನಗಳಲ್ಲಿ ಸಾಮಾನ್ಯವಾಗಲಿವೆ ಎಂದು ಭವಿಷ್ಯ ನುಡಿದಿರುವ ಮಹೀಂದ್ರಾ, ಶೇರ್ ಮಾಡಿರುವ ಈ ವಿಡಿಯೋಗೆ 2 ಲಕ್ಷಕ್ಕೂ ಹೆಚ್ಚು ವೀವ್ಸ್ ಬಂದಿದ್ದು, ಸಾವಿರಾರು ಕಲರ್‌ಫುಲ್ ಕಾಮೆಂಟ್‌ಗಳೂ ಸಹ ಬಿದ್ದಿವೆ.