ಕಲಬುರಗಿ: ಕೊರೋನಾ ಸೋಂಕಿನಿಂದ ಮೃತಪಟ್ಟ 17 ವರ್ಷದ ಯುವತಿ ಮನೆಗೆ ವರದಿ ಮಾಡಲು ಹೋಗಿದ್ದ ಪತ್ರಕರ್ತರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ.
ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಮರಾಠಿ ಪತ್ರಿಕೆಯ 63 ವರ್ಷದ ಪತ್ರಕರ್ತನಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಆತಂಕ ಮೂಡಿಸಿದೆ. ನಿವೃತ್ತ ಶಿಕ್ಷಕರಾಗಿರುವ ಪತ್ರಕರ್ತ ಮರಾಠಿ ಪತ್ರಿಕೆಯ ಆಳಂದ ತಾಲೂಕು ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಇತ್ತೀಚೆಗೆ 17 ವರ್ಷದ ಯುವತಿ ಕೊರೋನಾದಿಂದ ಮೃತಪಟ್ಟಿದ್ದು ಅವರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದರು. ಅಂತ್ಯಕ್ರಿಯೆಯಲ್ಲಿಯೂ ಭಾಗವಹಿಸಿದ್ದರು. ಇದರ ಪರಿಣಾಮ ಸೋಂಕು ತಗುಲಿರಬಹುದೆಂದು ಹೇಳಲಾಗಿದ್ದು, ಅವರ ಮನೆಯ ಸಂಪರ್ಕ ರಸ್ತೆ ಬಂದ್ ಮಾಡಿ ಸೀಲ್ ಡೌನ್ ಮಾಡಲಾಗಿದೆ.