ದೇಶದೆಲ್ಲೆಡೆ ಕೊರೋನಾ ವೈರಸ್ ಅಬ್ಬರ ಮುಂದುವರೆದು ಆರೋಗ್ಯ ಸೇವಾ ಕಾರ್ಯಕರ್ತರು, ಪೌರ ಕಾರ್ಮಿಕರು ಹಾಗೂ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದಾರೆ.
ಇಂಥ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ಕ್ಷೇಮಕ್ಕೆ ಕೇರಳದ ತಂತ್ರಿಯೊಬ್ಬರು ಇದೇ ಕೊರೋನಾ ವೈರಸ್ ಅನ್ನು ಹೆಮ್ಮಾರಿಯ ರೂಪದಲ್ಲಿ ಪೂಜೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇವರ ಈ ಕೈಂಕರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಪಹಾಸ್ಯದ ಟೀಕೆಗಳು ವ್ಯಕ್ತವಾಗಿವೆ.
ಇಲ್ಲಿನ ಕಡಕ್ಕಲ್ ಎಂಬಲ್ಲಿ ಕೋವಿಡ್-19ನ ಥರ್ಮಾಕೋಲ್ ಪ್ರತಿಮೆ ಸೃಷ್ಟಿಸಿ, ಅದನ್ನು ಪೂಜೆ ಮಾಡುವ ಕೋಣೆಯಲ್ಲಿ ಪೂಜಿಸುತ್ತಿರುವ ಅನಿಲನ್ ಎಂಬುವವರು ಮಾತನಾಡಿ, “ಈ ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ನೋಡುತ್ತಿದ್ದೇನೆ” ಎಂದಿದ್ದಾರೆ.
“33 ಕೋಟಿ ಹಿಂದೂ ದೇವತೆಗಳು ಇದ್ರೂ ಸಹ ಸಂವಿಧಾನದ ಅಡಿಯಲ್ಲಿ ಕೊಡಮಾಡಿರುವ ಮೂಲಭೂತ ಹಕ್ಕನ್ನು ಬಳಸಿಕೊಂಡು ನಾನು ಈ ವೈರಸ್ ಅನ್ನು ಪೂಜಿಸುತ್ತಿದ್ದೇನೆ” ಎನ್ನುತ್ತಾರೆ ಈ ತಂತ್ರಿ.