ನವದೆಹಲಿ: ಶತಾಯಗತಾಯ ಈ ವರ್ಷ ಐಪಿಎಲ್ ಟಿ-20 ಟೂರ್ನಿ ನಡೆಸಲೇಬೇಕು ಎಂದು ಹಠ ಹಿಡಿದಂತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತೊಂದು ಪ್ಲಾನ್ ಮಾಡಿಕೊಂಡಿದೆ.
ಭಾರತದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಯುಎಇನಲ್ಲಿ ಐಪಿಎಲ್ ಟೂರ್ನಿ ನಡೆಸಲು ಪ್ಲಾನ್ ಮಾಡಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆ ನಡೆಸಲಾಗಿದೆ.
ದುಬೈ, ಅಬುದಾಭಿ ಮತ್ತು ಶಾರ್ಜಾದಲ್ಲಿ ಅಂತರರಾಷ್ಟ್ರೀಯ ಕ್ರೀಡಾಂಗಣಗಳಿವೆ. ಈ ಕ್ರೀಡಾಂಗಣಗಳ ಸಮೀಪದಲ್ಲೇ ಆಟಗಾರರು ಉಳಿದುಕೊಳ್ಳಲು ಹೋಟೆಲ್ ಗಳು ಇವೆ. ಯುಎಇ ಕ್ರಿಕೆಟ್ ಮಂಡಳಿ ಆಟಗಾರರ ಸುರಕ್ಷತೆಗೆ ಎಲ್ಲಾ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ – ಅಕ್ಟೋಬರ್ ನಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ತಯಾರಿ ನಡೆಸಿದೆ.
2014ರ ಐಪಿಎಲ್ ಮೊದಲ 20 ಪಂದ್ಯ ಯುಎಇನಲ್ಲಿ ನಡೆದಿದ್ದು, ಅದೇ ರೀತಿ ಈ ಬಾರಿಯೂ ಅಲ್ಲಿಯೇ ಐಪಿಎಲ್ ಪಂದ್ಯಾವಳಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.