ನವದೆಹಲಿ: ಲಾಕ್ ಡೌನ್ ಸಡಿಲವಾದ ನಂತರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತ 9ನೇ ದಿನ ಏರಿಕೆ ಆಗಿದೆ.
ಸೋಮವಾರ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 48 ಪೈಸೆ, ಡೀಸೆಲ್ ದರ ಪ್ರತಿ ಲೀಟರ್ ಗೆ 59 ಪೈಸೆಯಷ್ಟು ಹೆಚ್ಚಳವಾಗಿದೆ. ದೈನಂದಿನ ತೈಲ ಬೆಲೆ ಪರಿಷ್ಕರಣೆ ಆರಂಭವಾದ ನಂತರದಲ್ಲಿ ಅತ್ಯಧಿಕ ಏರಿಕೆ ಇದಾಗಿದೆ. ಕಳೆದ 9 ದಿನಗಳ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 5 ರೂಪಾಯಿಯಷ್ಟು ಹೆಚ್ಚಳವಾಗಿದೆ.