ಮದುವೆ ಮನೆಯಲ್ಲಿ ಬಿಜೆಪಿ ಶಾಸಕ, ಸಿಎಂ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ಕ್ಷೇತ್ರದ ಶಾಸಕರಾದ ಎಂ.ಪಿ. ರೇಣುಕಾಚಾರ್ಯ 10 ಕ್ಕೂ ಮದುವೆ ಮನೆಗಳಿಗೆ ತೆರಳಿ ವಧು, ವರರಿಗೆ ಮಾಸ್ಕ್ ಕೊಟ್ಟು ಹಾಕಿಕೊಳ್ಳುವಂತೆ ತಿಳಿಸಿದ್ದಾರೆ. ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸಬೇಕೆಂಬುದು ಸೇರಿದಂತೆ ಕೊರೋನಾ ಸೋಂಕು ತಡೆ ಜಾಗೃತಿ ಮೂಡಿಸಿದ್ದಾರೆ.
ಕ್ಷೇತ್ರದಲ್ಲಿ 10 ಮತ್ತು ಹೆಚ್ಚು ಮದುವೆಗಳಲ್ಲಿ ಭಾಗಿಯಾದ ರೇಣುಕಾಚಾರ್ಯ ಸಾಮಾಜಿಕ ಅಂತರ ಕಾಯ್ದುಕೊಂಡು ಜನರಲ್ಲಿ ಕೊರೋನಾ ತಡೆಗೆ ಜಾಗೃತಿ ಮೂಡಿಸಿದ್ದಾರೆ.