ಬೆಂಗಳೂರು: ಮಿಂಟೋ ಆಸ್ಪತ್ರೆ ವೈದ್ಯರು ಕೊರೋನಾ ಸೋಂಕು ಹರಡುವ ಕುರಿತಾಗಿ ನೀಡಿದ ವರದಿ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಸೋಂಕಿತರ ಕಣ್ಣೀರಿನಿಂದಲೂ ಕೊರೋನಾ ಹರಡುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಹೊಸ ಆತಂಕ ಮೂಡಿಸಿದೆ.
ಕಣ್ಣೀರಿಲ್ಲೂ ಕೊರೋನಾ ಸೋಂಕು ಹರಡುವುದು ಸಾಬೀತಾಗಿದೆ. ಮಿಂಟೋ ಆಸ್ಪತ್ರೆ ವೈದ್ಯರ ಸಂಶೋಧನೆಯಲ್ಲಿ ಈ ವಿಷಯ ಗೊತ್ತಾಗಿದೆ. ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಮಿಂಟೋ ಆಸ್ಪತ್ರೆ ವೈದ್ಯರು ಅಧ್ಯಯನ ನಡೆಸಿದ್ದಾರೆ.
ಮಿಂಟೋ ಆಸ್ಪತ್ರೆ ತಜ್ಞ ವೈದ್ಯರ ತಂಡ ಕೈಗೊಂಡ ಸಂಶೋಧನೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದ 45 ಸೋಂಕಿತರ ಕಣ್ಣೀರಿನ ಟೆಸ್ಟ್ ಮಾಡಲಾಗಿದ್ದು ರೋಗ ಲಕ್ಷಣ ಲ್ಲದ ಒಬ್ಬ ವ್ಯಕ್ತಿಗೆ ಸೋಂಕು ಇರುವುದು ಪತ್ತೆಯಾಗಿದೆ.
ಕಣ್ಣುಗಳನ್ನು ಮುಟ್ಟಿ ಯಾವುದೇ ವಸ್ತುಗಳನ್ನು ಸ್ಪರ್ಶಿಸಿದರೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಈ ಬಗ್ಗೆಯೂ ಜನರು ನಿಗಾವಹಿಸುವುದು ಮುಖ್ಯವೆಂದು ನೇತ್ರ ವೈದ್ಯರು ತಿಳಿಸಿದ್ದಾರೆ. ಎಚ್ಚರಿಕೆಯಿಂದ ರೋಗಿಗಳನ್ನು ನೋಡಬೇಕು. ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು ಎಂದು ಹೇಳಲಾಗಿದೆ.