ಲಾಕ್ ಡೌನ್ ಪ್ರಾರಂಭವಾದಾಗಿನಿಂದ ಎಲ್ಲರ ಬಳಿ ಬಹಳ ಸಮಯ ಇತ್ತು. ಇದಕ್ಕಾಗಿ ಬಹಳಷ್ಟು ಮಂದಿ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿದ್ದರು.
ಆದರಲ್ಲಿ ಕೆಲವು ಭರ್ಜರಿ ವೈರಲ್ ಆಗಿವೆ. ಈಗ ಅವುಗಳಲ್ಲಿ ಈಗಾಗಲೇ ನೀವು ವೀಕ್ಷಿಸಿರಬಹುದಾದ ಬೆಸ್ಟ್ 10 ವಿಡಿಯೋವನ್ನು ವೀಕ್ಷಕರಿಗಾಗಿ ಕೊಡಲಾಗಿದೆ.
1. ಫೋನ್ ಮೂಲಕ ಸೋಷಿಯಲ್ ಮೀಡಿಯಾವನ್ನು ನೋಡುತ್ತಿದ್ದಾಗ ಅಲ್ಲಿಗೆ ಬಂದ ಅಮ್ಮ ಫೋನ್ ಅನ್ನು ಕೈಯಲ್ಲಿ ಮುಟ್ಟಬೇಡ ಎಂದು ಗದರುತ್ತಾಳೆ. ಅದಕ್ಕೆ ಬಾಲಕ ತನ್ನ ಕಾಲಿನಲ್ಲಿ ಫೋನ್ ಇಟ್ಟುಕೊಂಡು ಬಳಕೆ ಮಾಡುತ್ತಾನೆ.
2. ಕೊರೋನಾ ಹಿನ್ನೆಲೆ ಬಹಳಷ್ಟು ಮದುವೆಯನ್ನು ಮುಂದೂಡಿದರೆ, ಇನ್ನು ಕೆಲವಷ್ಟು ಜನ ನಿಯಮ ಪಾಲಿಸಿ ವಿವಾಹ ಮಾಡಿಕೊಂಡಿದ್ದಾರೆ. ಅವುಗಳು ಹೇಗಿವೆ ಎಂಬುದು ಟಿಕ್ ಟಾಕ್ ನಲ್ಲಿದೆ.
3. ಪೆಪ್ಪಿ ಸಾಂಗ್ ನಿಂದ ಹಿಡಿದು ಬಚ್ಕೆ ರಹಿ ಹಾಡಿನವರೆಗೂ ಎಲ್ಲ ಹಾಡನ್ನೂ ಮದುವೆಯಲ್ಲಿ ಹಾಕುತ್ತಾರೆ. ಆದರೆ, ವಿದೇಶಿಯರು ಬಾಂಗ್ರಾ ಮಾಡಿದ್ದು ಟಿಕ್ ಟಾಕ್ ನಲ್ಲಿದೆ.
4. ಲಾಕ್ ಡೌನ್ ನಲ್ಲಿ ಅಮ್ಮ ಮಾಡುವ ಅಡುಗೆ ಹೇಗಿರುತ್ತೆ ಎಂದು ಸ್ವತಃ ಅಡುಗೆ ಮನೆಗೆ ಹೋಗಿ ಟ್ರೈ ಮಾಡಿದ್ದು ಹೇಗೆ ಅಂತ ವಿವರವಿದೆ.
5. ಕೊರೋನಾ ವೈರಸ್ ಸಮಯದಲ್ಲಿ ಸೋಪು ಹಾಕಿ ಕೈತೊಳೆಯುವುದು ಕಡ್ಡಾಯ. ಆದರೆ, ಹೊರಗೆ ಹೋದಾಗ ಏನು ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ಕೂಡಾ ಸಿಗುತ್ತೆ.
6. ನೀವು ಮನೆಯಲ್ಲಿ ಕಸ ಗುಡಿಸುವಾಗ ಯಾರೂ ಓಡಾಡಬಾರದು ಎಂಬ ಕಟ್ಟುನಿಟ್ಟಿನ ನಿಯಮ ಇರುತ್ತೆ. ಅಷ್ಟಾಗಿಯೂ ಯಾರಾದರೂ ಓಡಾಡಿದರೆ ಏನಾಗುತ್ತೆ..?
7. ಈ ಸಮಯದಲ್ಲಿ ಮಕ್ಕಳಿಗೆಲ್ಲ ಮನೆಯಲ್ಲೇ ಶಾಲೆ ಇರುತ್ತದೆ. ಆದರೆ, ಪೋಷಕರಿಗೆ ಈ ಸಂದರ್ಭ ಅಷ್ಟು ಅನುಕೂಲಕರವಲ್ಲ ಎಂಬುದು ಏಕೆ..?
8. ಫೋನಿನ ಬ್ಯಾಟರಿ ಡೆಡ್ ಆಗುತ್ತೆ ಅನ್ನುವಾಗ ಎಲ್ಲರ ವರ್ತನೆ ಹೇಗಿರುತ್ತೆ ಅನ್ನೋದನ್ನ ನೀವು ಟಿಕ್ ಟಾಕ್ ವಿಡಿಯೋದಲ್ಲಿ ನೋಡಬಹುದು.
9. ವ್ಯಕ್ತಿಯೊಬ್ಬ ಮಹಾಭಾರತದ ಟೈಟಲ್ ಹಾಡನ್ನು ರೆಕಾರ್ಡ್ ಮಾಡುವ ಫನ್ನಿ ಕ್ಲಿಪ್ ನೋಡಿದ್ರೆ ನೀವು ನಗುತ್ತೀರಿ… ಶಿಲ್ಪಾ ಶೆಟ್ಟಿ ಸಹ ಈಗಾಗಲೇ ನಕ್ಕಿದ್ದಾರೆ.
10. ಡೇವಿಡ್ ವಾರ್ನರ್ ಅವರ ಟುಮ್ ಕಾ ಚಾಲೆಂಜ್ ಕೂಡಾ ನಿಮಗೆ ಟಿಕ್ ಟಾಕ್ ನಲ್ಲಿ ಸಿಗುತ್ತೆ.